18ವರ್ಷ ಮೇಲ್ಪಟ್ಟವರಿಗೂ ಲಸಿಕೆ: ಶಾಮನೂರು ಶಿವಶಂಕರಪ್ಪ

ದಾವಣಗೆರೆ.ಜೂ.೧೧;  ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ‍್ಯಕ್ರಮವೂ ಇಂದು ಸಹ ಮುಂದುವರೆದಿದ್ದು, ನಾಗರೀಕರು ಉಚಿತ ಲಸಿಕೆಯನ್ನು ಪಡೆದರು. ಇಂದು ದಾವಣಗೆರೆಯ ಎಸ್.ಎಂ.ಕೃಷ್ಣ ನಗರದ ಡಾ.ಬಾಬು ಜಗಜೀವನರಾಂ ಸಮುದಾಯ ಭವನ, ಬಂಬೂಬಜಾರ್‌ನ ಮಲ್ಲಿಕಾರ್ಜುನ ದೇವಸ್ಥಾನ, ಕೆ.ಆರ್.ರಸ್ತೆಯ ಡಾ.ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆ ಮತ್ತು ಸೆಂಟ್ ಮೇರಿಸ್ ಶಾಲಾವರಣದಲ್ಲಿ ವಿವಿಧ ವಾರ್ಡ್ ಗಳ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆ ನೀಡಲಾಯಿತು. ವಾರ್ಡ್ ನಂಬರ್ 6,13,15 ಮತ್ತು 19ನೇ ವಾರ್ಡ್ನ ನಾಗರೀಕರು ಲಸಿಕೆ ಪಡೆದರು. ಸ್ವತಹ ಶಾಸಕರಾದ  ಶಾಮನೂರು ಶಿವಶಂಕರಪ್ಪನವರು ಲಸಿಕೆ ನೀಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ಲಸಿಕೆ ಪಡೆದ ನಾಗರೀಕರ ಯೋಗಕ್ಷೇಮವನ್ನು ವಿಚಾರಿಸಿ ಇಂದಿನಿಂದ ಸರ್ಕಾರದ ಅನುಮತಿ ನಿಬಂಧನೆಗೊಳಪಟ್ಟು 18ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಯುವಕರು ವಯಸ್ಸಾದವರಿಗೆ ಆದ್ಯತೆ ನೀಡಿ ಲಸಿಕೆ ಪಡೆಯಬೇಕೆಂದರು.ನಾಲ್ಕು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದ ನಾಗರೀಕರಿಗೆ ನೀರು ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಸ್.ಮಲ್ಲಿಕಾರ್ಜುನ್, ಉದಯ್ ಕುಮಾರ್,  ಸುಧಾ ಇಟ್ಟಿಗುಡಿ ಮಂಜುನಾಥ್,  ಆಶಾ ಉಮೇಶ್,  ಸಾವನ್ ಜೈನ್, ಉಮಾಶಂಕರ್,  ಅಯೂಬ್ ಪೈಲ್ವಾನ್, ಬಾಬುರಾವ್ ಸಾಳಂಕಿ, ಡಿ.ಸುರೇಶ್, ಕಂಟ್ರಾಕ್ಟರ್ ಮಂಜುನಾಥ್ ಇತರರಿದ್ದರು.