18ರಂದು ದೇಶಾದ್ಯಂತ ಪ್ರಾಕೃತಿಕ ಚಿಕಿತ್ಸಾ ದಿನಾಚರಣೆ: ಅನಂತ ಬಿರಾದಾರ

ಬೀದರ:ನ.17:ಪ್ರಾಕೃತಿಕ ಚಿಕಿತ್ಸೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಭಾರತ ಸರ್ಕಾರದ ವತಿಯಿಂದ ಇದೇ ನವೆಂಬರ್ 18ರಂದು ದೇಶಾದ್ಯಂತ ಪ್ರಾಕೃತಿಕ ಚಿಕಿತ್ಸಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಇಂಟರ್‍ನ್ಯಾಷನಲ್ ನ್ಯಾಚುರೋಪತಿ ಅರ್ಗನೈಜೇಶನ್(ಐಎನ್‍ಓ) ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರು ತಿಳಿಸಿದ್ದಾರೆ.

ಪ್ರಾಕೃತಿಕ ಚಿಕಿತ್ಸಾ ದಿನಾಚರಣೆಯ ನಿಮಿತ್ತ ದೇಶಾದ್ಯಂತ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸೂರ್ಯ ಫೌಂಡೇಶನ್ ಮತ್ತು ಇಂಟರ್‍ನ್ಯಾಷನಲ್ ನ್ಯಾಚುರೋಪತಿ ಅರ್ಗನೈಜೇಶನ್(ಐಎನ್‍ಓ), ಸಿಸಿಆರ್‍ವೈಎನ್ ಹಾಗೂ ಭಾರತ ಸರ್ಕಾರದ ಆಯುಷ್ ಇಲಾಖೆಯ ಸಹಯೋಗದಲ್ಲಿ “ರೋಗ ಮುಕ್ತ ಭಾರತ ಅಭಿಯಾನ” ಶೀರ್ಷಿಕೆಯಡಿ ದೇಶಾದ್ಯಂತ 2021ರ ನವೆಂಬರ್ 18ರಿಂದ 2022ರ ಆಗಸ್ಟ್ 15ರವರೆಗೆ ಎಲ್ಲ ರಾಜ್ಯಗಳ 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ವಿಶೇಷವಾಗಿ ಸೂರ್ಯ ಫೌಂಡೇಶನ್‍ನಿಂದ ಪ್ರಾಕೃತಿಕ ಚಿಕಿತ್ಸಾ ದಿನವಾದ ನವೆಂಬರ್ 18ರಂದು ದೆಹಲಿಯ ಡಾ.ಅಂಬೇಡ್ಕರ್ ಇಂಟರ್‍ನ್ಯಾಷನಲ್ ಸೆಂಟರ್‍ನಲ್ಲಿ ಮುಖ್ಯ ಕಾರ್ಯಕ್ರಮವನ್ನು ಜರುಗಲಿದ್ದು, ಸುಮಾರು 75 ದೇಶಗಳ ಪ್ರತಿನಿಧಿಗಳು ವಚ್ರ್ಯುವಲ್ ಮುಖಾಂತರ ಭಾಗವಹಿಸುವರು. ಕೇಂದ್ರ ಆಯುಷ್ ಇಲಾಖೆಯ ಸಚಿವರಾದ ಸರ್ಬಾನಂದ ಸೋನೋವಾಲ್ ಹಾಗೂ ಪ್ರಸಿದ್ಧ ಯೋಗಗುರು ಬಾಬಾ ರಾಮದೇವ ಅವರು ಪಾಲ್ಗೊಳ್ಳುವರು.

ರಾಷ್ಟ್ರಮಟ್ಟದ ಸ್ಪರ್ಧೆ: ರಾಷ್ಟ್ರ ಮಟ್ಟದಲ್ಲಿ ”ಯಾರಾಗುತ್ತೀರಿ ಆರೋಗ್ಯ ರಕ್ಷಕರು” ಸ್ಪರ್ಧೆಯನ್ನು ತಿತಿತಿ.exಚಿm.iಟಿosuಡಿಥಿಚಿ.ಛಿom ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ನಡೆಸಲಾಗುತ್ತಿದೆ. ಸುಮಾರು 7 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ನವೆಂಬರ್ 18ರಿಂದ ನೋಂದಣಿ ಆರಂಭಗೊಳ್ಳಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅನಂತ ಬಿರಾದಾರ ಅವರು ಕೋರಿದ್ದಾರೆ.

ಪ್ರಾಕೃತಿಕ ಚಿಕಿತ್ಸಾ ಶಿಬಿರ, ವಿಚಾರ ಸಂಕಿರಣ: ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ದೇಶದ 75 ಸ್ಥಳಗಳಲ್ಲಿ ಪ್ರಾಕೃತಿಕ ಚಿಕಿತ್ಸಾ ಶಿಬಿರ ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತದೆ. 2021ರ ನವೆಂಬರ್ 21ರಿಂದ 2022ರ ಆಗಸ್ಟ್ 15ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ನ್ಯಾಚುರೋಪತಿ ಕುರಿತು ಆನ್‍ಲೈನ್ ವೆಬಿನಾರ್ ಜರುಗಲಿದೆ. ಅನುಭವಿಗಳು ಮಾರ್ಗದರ್ಶನ ನೀಡುವರು. ದೇಶದ ಎಲ್ಲ ಭಾಗಗಳಿಂದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲು ಅವಕಾಶವಿದೆ.

ಬೀದರ್‍ನಲ್ಲಿ ಕಾರ್ಯಕ್ರಮ: ಸೂರ್ಯ ಫೌಂಡೇಶನ್ ಮತ್ತು ಇಂಟರ್‍ನ್ಯಾಷನಲ್ ನ್ಯಾಚುರೋಪತಿ ಅರ್ಗನೈಜೇಶನ್(ಐಎನ್‍ಓ) ವತಿಯಿಂದ ನವೆಂಬರ್ 18ರ ಬೆಳಗ್ಗೆ 7 ಗಂಟೆಗೆ ಬೀದರ ನಗರದ ಬರೀದಶಾಹಿ ಉದ್ಯಾನವನದಲ್ಲಿ ಪ್ರಾಕೃತಿಕ ಚಿಕಿತ್ಸಾ ದಿನಾಚರಣೆ ಏರ್ಪಡಿಸಲಾಗಿದೆ.

ಐಎನ್‍ಓ ಜಿಲ್ಲಾ ಘಟಕದ ಅಧ್ಯಕ್ಷ ಧೊಂಡಿರಾಮ ಚಾಂದಿವಾಲೆ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮನ್ಮಥ ಸ್ವಾಮಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಬೀದರ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.