18ನೇ ವಾರ್ಡ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಾಗರ್

ಬಳ್ಳಾರಿ, ಏ.04: ಈ ತಿಂಗಳ 27ರಂದು ನಡೆಯುವ ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 18ನೇ ವಾರ್ಡಿನ ಕಾಂಗ್ರೆಸ್ ಟಿಕೆಟ್ ನ ಆಕಾಂಕ್ಷಿಯಾಗಿದ್ದಾರೆ. ಸಾಗರ್ ಎನ್ ಅವರು, ಬಳ್ಳಾರಿ ನಗರಸಭೆ ಮಾಜಿ ಕೌನ್ಸಿಲರ್ ಸತ್ಯನಾರಾಯಣ (ಸತ್ತಿ) ಅವರ ಪುತ್ರರಾಗಿರುವ ಇವರು ತುಮಕೂರಿನ ಸಿದ್ದಗಂಗಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಸ್ ನಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಅಧ್ಯಕ್ಷರ ಪ್ಯಾನಲ್ ನ ಸದಸ್ಯರಾಗಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಬಹುಭಾಷೆಗಳನ್ನು ಬಲ್ಲ ಇವರು ಯುವ ಉತ್ಸಾಹಿಗಳಾಗಿದ್ದಾರೆ. ಉದ್ಯಮಿಗಳಾಗಿರುವ ಅವರು, ತಂದೆಯವರಂತೆ ಜನಸೇವೆ ಬಯಸಿದ್ದು ಪ್ರಸಕ್ತ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 18ನೇ ವಾರ್ಡಿನಿಂದ ಸ್ಪರ್ಧೆ ಮಾಡಲು ಬಯಸಿದ್ದು ನಗರದ, ಜಿಲ್ಲೆಯ, ರಾಜ್ಯದ ಕಾಂಗ್ರೆಸ್ ನ ನಾಯಕರು, ಮುಖಂಡರು ಇದಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.