
ನವದೆಹಲಿ,ನ.೨-ದೇಶದಲ್ಲಿ ಕಳೆದ ತಿಂಗಳು ೧,೧೪೦ ಕೋಟಿ ದಾಟಿದ ಯುಪಿಐ ವಹಿವಾಟು ಮಾಡಿದ್ದು ಒಟ್ಟಾರೆ ವಹಿವಾಟಿನ ಮೌಲ್ಯ೧೭.೬ ಲಕ್ಷ ಕೋಟಿ ರೂಪಾಯಿಗಳನ್ನು ಮೀರಿ ಹೊಸ ದಾಖಲೆಯನ್ನು ಮಾಡಿದೆ.
ಯುಪಿಐ ವಹಿವಾಟುಗಳಲ್ಲಿ ಎರಡು ತಿಂಗಳುಗಳಿಂದ ಕಡಿಮೆಯಾದ ನಂತ ಅಕ್ಟೋಬರ್ ತಿಂಗಳಿನಲ್ಲಿ ವಹಿವಾಟು ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ನೈಜ-ಸಮಯದ ಪಾವತಿಗಳ ಮಾಹಿತಿ ಹಂಚಿಕೊಳ್ಳುವ ನ್ಯಾಷನಲ್ ಪೇಮೆಂಟ್ಸ್ ಕಾಪೆರ್ರೇಷನ್ ಆಫ್ ಇಂಡಿಯಾ ನೀಡಿರುವ ವರದಿಯ ಪ್ರಕಾರ ವಹಿವಾಟಿನ ಪ್ರಮಾಣದಲ್ಲಿ ಯುಪಿಐ ವರ್ಷದಿಂದ ವರ್ಷಕ್ಕೆ ಶೇಕಡಾ ೫೫ ರಷ್ಟು ಏರಿಕೆ ಕಂಡಿದೆ. ಹಾಗೂ ಮೌಲ್ಯದ ವಿಷಯದಲ್ಲಿ ಶೇಕಡಾ ೪೨ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ೧೦.೫೬ ಶತಕೋಟಿ ವಹಿವಾಟು ಪ್ರಮಾಣ ನೋಂದಾಯಿಸಿತ್ತು. ಆಗಸ್ಟ್‌ನಲ್ಲಿ ೧೦ ಶತಕೋಟಿ ಗಡಿಯನ್ನು ದಾಟಿದ್ದು ವರದಿಯಾಗಿತ್ತು ಇದೀಗ ಆಕ್ಟೋಬರ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ.
ಅಕ್ಟೋಬರ್ ೨೦೨೩ ರಲ್ಲಿ ೧೧ ಶತಕೋಟಿ ಯುಪಿಐ ವಹಿವಾಟುಗಳನ್ನು ಮಾಡಲಾಗಿದೆ ಗ್ರಾಹಕರು ಮೊಬೈಲ್‌ನಲ್ಲಿ ಯುಪಿಐ ಬಳಸಿಕೊಂಡು ರಿಯಲ್ ಟೈಮ್‌ನಲ್ಲಿ ತಡೆರಹಿತ ಪಾವತಿ ಮಾಡಿದ್ದಾರೆ ಎಂದು ಕೇಂದ್ರ ಎಲೆಕ್ಟ್ರಿನಿಕ್ಸ್ ಹಾಗೂ ಐಟಿ ಸಚಿವಾಲಯ ತಿಳಿಸಿದೆ.
ಪ್ರಸಕ್ತ ವರ್ಷದಲ್ಲಿ ೨ ಶತಕೋಟಿ ದೈನಂದಿನ ವಹಿವಾಟು ನಡೆಸುವ ಗುರಿ ಹೊಂದಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಕ್ರೆಡಿಟ್ ಬೆಳವಣಿಗೆ ಉತ್ತೇಜಿಸಲಾಗಿದೆ ಎಂದು ಎನ್ ಪಿಸಿಐ ಮುಖ್ಯಸ್ಥ ದಿಲೀಪ್ ಅಸ್ಬೆ ತಿಳಿಸಿದ್ದಾರೆ.
ಪಾವತಿಗಳ ವಿಷಯದಲ್ಲಿ ಗುರಿ ಸಾಧಿಸಬೇಕು ಎಂದಾದರೆ ದಿನಕ್ಕೆ ಒಂದೆರಡು ಶತಕೋಟಿ ವಹಿವಾಟುಗಳನ್ನು ಹೊಂದಿರಬೇಕು ಹಾಗೂ ಕ್ರೆಡಿಟ್ ಭಾಗದಲ್ಲಿ ಫಿನ್‌ಟೆಕ್‌ಗಳನ್ನು ತೊಡಗಿಸಿ ಕೊಳ್ಳುವುದರೊಂದಿಗೆ ಬಳಕೆದಾರರಲ್ಲಿ ೧೦ ಪಟ್ಟು ಬೆಳವಣಿಗೆ ಸಾಧಿಸಬೇಕಾಗಿದೆ ಎಂದು ಹಬ್ಬದ ಸೀಸನ್‌ಗಳಾದ ಅಕ್ಟೋಬರ್ ಹಾಗೂ ನವೆಂಬರ್‍ನಲ್ಲಿ ಯುಪಿಐ ಪ್ಲಾಟ್‌ಫಾರ್ಮ್ ಇತರ ತಿಂಗಳುಗಳಿಗಿಂತ ಹೆಚ್ಚಿನ ಮೇಲುಗೈ ಸಾಧಿಸುತ್ತದೆ, ಇದು ಯುಪಿಐ ಅನ್ನು ಇನ್ನಷ್ಟು ಬಲಿಷ್ಟಗೊಳಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.