17 ಹೊಸ ಪ್ರಕರಣಗಳು: ಕಡಿಮೆ ಕೇಸ್ನಲ್ಲಿ ಬೀದರ್ ರಾಜ್ಯಕ್ಕೆ ಮಾದರಿ

ಬೀದರ :ಜೂ.1: ಗಡಿ ಜಿಲ್ಲೆ ಬೀದರನಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಇಳಿಮುಖವಾಗುತ್ತಿದ್ದು, ಸೋಮವಾರ ರಾಜ್ಯದಲ್ಲೇ ಅತಿ ಕಡಿಮೆ 17 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ, ಓರ್ವನ ಸಾವು ಸಂಭವಿಸಿದೆ.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಪಾಸಿಟಿವಿಟ್ ದರ ಕಡಿಮೆಯಾಗಿದ್ದು, 50ರ ಆಸುಪಾಸಿನಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಪಾಸಿಟಿವ್ ಪ್ರಕರಣ ಸೇರಿ ಈವರೆಗೆ ಸೋಂಕಿತರ ಸಂಖ್ಯೆ ೨೩೮೩೮ಕ್ಕೆ ಮತ್ತು ಮೃತರ ಸಂಖ್ಯೆ ೩೪೬ಕ್ಕೆ ಏರಿಕೆಯಾಗಿದೆ. ಸೋಮವಾರ ೬೬ ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಇನ್ನೂ ೩೪೬ ಸಕ್ರೀಯ ಪ್ರಕರಣಗಳು ಜಿಲ್ಲೆಯಲ್ಲಿವೆ.