17% ವೇತನ ಹೆಚ್ಚಳ: ಇದು ಸಮಾಧಾನಕರ ಬಹುಮಾನ

ಹುಣಸಗಿ,ಮಾ.2-ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳಲ್ಲಿ 1 ಏಳನೇ ವೇತನ ಆಯೋಗದ ಮಧ್ಯಂತರವಾಗಿ ಶೇಕಡ 40% ಪರಿಹಾರ ಕೇಳಿದ್ದೆವು, ನಮ್ಮ ನಿರೀಕ್ಷೆ ಶೇಕಡಾ 20% ರಿಂದ 25% ಇತ್ತು, ಆದರೆ ಸರ್ಕಾರ ನೆರವೇರಿಸಲಿಲ್ಲ. ಶೇಕಡ 17% ಮಂಜೂರಿ ಮಾಡಿರುವುದು ಖುಷಿಯನ್ನು ತಂದಿದೆ ಎಂದು ಹುಣಸಗಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಸನಗೌಡ ವಠಾರ ತಿಳಿಸಿದ್ದಾರೆ.
ಎರಡನೇ ಬೇಡಿಕೆ ಎನ್‍ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಗಾಗಿ, ದೇಶದ ವಿವಿಧ 5 ರಾಜ್ಯಗಳಲ್ಲಿ ಎನ್‍ಪಿಎಸ್ ರದ್ದತಿಯ ವರದಿಯನ್ನು ತರಿಸಿಕೊಳ್ಳಲು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.