17 ರಂದು ಕೋವಿಡ್-19 ಬೃಹತ್ ಮೇಳ

ಸಂಜೆ ವಾಣಿ
ಕೊಟ್ಟೂರು ಸೆ 16 :ತಾಲೂಕಿನಲ್ಲಿ 17 ರಂದು ಕೋವಿಡ್-19 ಬೃಹತ್ ಮೇಳ ಹಮ್ಮಿಕೊಳ್ಳಲಾಗಿದ್ದು, ಕೊಟ್ಟೂರು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ 500 ಹಾಗೂ ಪಟ್ಟಣಕ್ಕೆ 5000 ವ್ಯಾಕ್ಸಿನ್ ಹಾಕಿಸುವ ಗುರಿಯನ್ನು ನೀಡಿರುತ್ತಾರೆ.  ಅದರಂತೆ 14 ಪಂಚಾಯಿತಿಗಳಿಗೆ 7000 ಹಾಗೂ ಪಟ್ಟಣದ 5000 ಸೇರಿ ಒಟ್ಟು 12,000 ಗುರಿ ನಿಗಧಿಪಡಿಸಲಾಗಿದೆ ಎಂದು ತಹಶೀಲ್ದಾರ್ ಕುಮಾರಸ್ವಾಮಿ ಹೇಳಿದರು.
ಈ ಸಭೆಯಲ್ಲಿ ಕಾರ್ಯನಿರ್ವಾಹಕಅಧಿಕಾರಿಗಳಾದ ತಿಮ್ಮಣ್ಣ ಹುಲ್ಲುಮನಿ, ಸಿಪಿಐ ಟಿ ಎಸ್ ಮುರಿಗೇಶ್, ಮುಖ್ಯಾಧಿಕಾರಿ ನಸರುಲ್ಲಾ, ಸಮುದಾಯ ಆರೋಗ್ಯ ಕೇಂದ್ರದ ವೈಧ್ಯರಾದ ಡಾ|| ಬದ್ಯಾನಾಯ್ಕ, ಶಿಕ್ಷಣ ಇಲಾಖೆಯ ಇಸಿಒ ಸಿ.ಅಜ್ಜಪ್ಪ, ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.