17 ರಂದುಶ್ರೀ ಶಿರಡಿ ಸಾಯಿಬಾಬಾರವರ ಜಯಂತ್ಯೋತ್ಸವ

ತಾಳಿಕೋಟೆ:ಏ.4: ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ವತಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿರುವ ಶ್ರೀ ಶಿರಡಿ ಸಾಯಿಬಾಬಾರವರ ಜಯಂತ್ಯೋತ್ಸವ ಹಾಗೂ 20 ನೇ ವಾರ್ಷಿಕೋತ್ಸವವನ್ನು ಇದೇ ದಿ.17 ರಂದು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟಿನ ಗೌರವಾಧ್ಯಕ್ಷರಾದ ಡಾ.ಎಲ್.ಎನ್.ಶೆಟ್ಟಿ ಅವರು ನುಡಿದರು.
ಈ ಜಯಂತ್ಯೋತ್ಸವ ಕುರಿತು ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಪ್ರತಿ ವರ್ಷದಂತೆ ಈ ವರ್ಷವು ದಿ.17-04-2024 ಬುಧವಾರರಂದು ಶ್ರೀ ಶಿರಡಿ ಸಾಯಿಬಾಬಾರವರ ಜಯಂತ್ಯೋತ್ಸವ ಏರ್ಪಡಿಸಲಾಗಿದೆ ಅಂದು ಮುಂಜಾನೆ 7 ಗಂಟೆಗೆ ಶ್ರೀ ನಿಮಿಷಾಂಬಾದೇವಿ ಮಂದಿರದಿಂದ ಶ್ರೀ ವಾಸವಿ ಕಲ್ಯಾಣ ಮಂಟಪದ ವರೆಗೆ ಮಹಾ ಭಜನೆಯೊಂದಿಗೆ ಫಲ್ಲಕ್ಕಿ ಉತ್ಸವವು ಜರುಗುವದು.
ಮುಂಜಾನೆ 19-15 ಗಂಟೆಗೆ ಪ್ರಾರ್ಥನೆ, 9-30 ಗಂಟೆಗೆ ಶ್ರೀ ಸಾಯಿಬಾಬಾರವರ ಮಹಾ ಪೂಜೆ ಹಾಗೂ ಪಂಚಾಮೃತ ಅಭಿಷೇಕ ಜರುಗುವದು. 10-30 ಗಂಟೆಗೆ ಶ್ರೀ ಸಾಯಿಬಾಬಾರವರ ತೊಟ್ಟಿಲು ಸೇವೆ 11-45 ಗಂಟೆಗೆ ಶ್ರೀ ಸಾಯಿ ಬಾಬಾರವರ ಭಜನಾ ಕಾರ್ಯಕ್ರಮ ಜರುಗುವದು. 11-45 ಗಂಟೆಯಿಂದ ಶ್ರೀ ಸಾಯಿ ಭಕ್ತರಿಂದ ಸಂಗೀತ ಸೇವೆ ಜರುಗುವದಲ್ಲದೇ 12-30 ಗಂಟೆಗೆ ಶ್ರೀ ವೇ.ಸಂತೋಷಬಟ್ ಜೋಶಿ ಇವರಿಂದ ಸಾಯಿ ಕಥಾಮೃತ ಜರುಗುವದು. 1-30 ಗಂಟೆಗೆ ಮಹಾ ಮಂಗಳಾರತಿ ಜರುಗುವದಲ್ಲದೇ 2 ಗಂಟೆಗೆ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗುವದೆಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟಿನ ಗೌರವ ಅಧ್ಯಕ್ಷರಾದ ಡಾ.ಎನ್.ಎಲ್.ಶೆಟ್ಟಿ ಅವರು ತಿಳಿಸಿದರು.
ಈ ಸಮಯದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿ.ಬಿ.ತಿಳಗೂಳ, ಸದಸ್ಯರುಗಳಾದ ಜಿ.ಟಿ.ಘೋರ್ಪಡೆ, ಡಿ.ಕೆ.ಲೋಕರೆ, ಜಿ.ಜಿ.ಕಾದಳ್ಳಿ, ಕೆ.ಸಿ.ಸಜ್ಜನ, ಸುಭಾಸಚಂದ್ರ ಸಾಲಂಕಿ, ಶಿವಲಿಂಗ ಸಾಲಂಕಿ, ಸತೀಶರಾವ್ ದಪ್ತೆದಾರ, ಕೆ.ಆರ್.ಪಾಟೀಲ, ಹಾಗೂ ಆನಂದ ಕುಲಕರ್ಣಿ, ಜಾನಕೀಬಾಯಿ ರಂಗಸುಭೆ ಮೊದಲಾದವರು ಉಪಸ್ಥಿತರಿದ್ದರು.