17 ನೇ ವಾರ್ಡು ಬಿಜೆಪಿ ಅಭ್ಯರ್ಥಿ ಭರ್ಜರಿ ಪ್ರಚಾರ

ಬಳ್ಳಾರಿ:ಏ.21- ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ 17 ನೇ ವಾರ್ಡಿನ ಅಂಜಿನಪ್ಪ ನಗರದಲ್ಲಿ ಬಿಜೆಪಿಯ ಅಭ್ಯರ್ಥಿ ಚಂದ್ರಕಳಾ ಕೆ.ಹುಲಿಮಾನಪ್ಪ ಅವರು ಇಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸೇರಿದಂತೆ ಹಲವು ಮುಖಂಡರ ಜೊತೆ ಸೇರಿ ಮನೆ ಮನೆಗೆ ತೆರಳಿ ಮತ ಯಾಚನೆ‌ ಮಾಡಿದರು.
ಬಿಜೆಪಿ ಅಭ್ಯರ್ಥಿ ಆಯ್ಕೆಯಾದರೆ ಪಾಲಿಕೆಯಲ್ಲಿ ಉತ್ತಮ ಆಡಳಿತ ನಡೆಸಿ ನಗರದ ಅಭಿವೃದ್ದಿ ಮಾಡಲಿದೆ ಅದಕ್ಕಾಗಿ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಮತದಾರರಿಗೆ ಮನವಿ‌‌ ಮಾಡಲಾಯಿತು.
ಈ ಸಂದರ್ಭದಲ್ಲಿ ಜಗನ್, ಹನುಮನ್ ನಗರ ಜಗನ್ನಾಥ್, ರಮೇಶ್, ನರಸಿಂಹಲು, ಎರ್ರಿ ಸ್ವಾಮಿ, ಮೊಹಮ್ಮದ್, ಸೋಮಶೇಖರ್, ಮಲ್ಲಿಕಾರ್ಜುನಪ್ಪ, ಬಿ ಮೌನೇಶ್, ತಿಮ್ಮಪ್ಪ, ಮಾನಯ್ಯ, ಶ್ರೀರಾಮು ಹಾಗೂ ವಾರ್ಡಿನ ಪ್ರಮುಖ ಮುಖಂಡರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.