17 ದಿನಗಳಲ್ಲಿ 753 ಮನೆಗಳು ಭಾಗಶ ಕುಸಿತ

ಬೀದರ್:ಜು.19: ಜಿಲ್ಲೆಯಲ್ಲಿ ಜಿಟಿ ಜಿಟಿಯಾಗಿ ಮ6ಳೆ ಮುಂದುವರಿದಿದೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 24.97 ಮಿ.ಮೀ ಮಳೆಯಾಗಿದೆ. ಕಮಲನಗರ ತಾಲ್ಲೂಕಿನ ದಾಬಕಾದಲ್ಲಿ 43.40 ಮಿ.ಮೀ ಮಳೆ ದಾಖಲಾಗಿದೆ.

ಔರಾದ್ ತಾಲ್ಲೂಕಿನಲ್ಲಿ ಸರಾಸರಿ 23.20 ಮಿ.ಮೀ, ಬೀದರ್‍ನಲ್ಲಿ 25.68 ಮಿ.ಮೀ, ಭಾಲ್ಕಿಯಲ್ಲಿ 24.25 ಮಿ.ಮೀ, ಬಸವಕಲ್ಯಾಣದಲ್ಲಿ 25.08 ಮಿ.ಮೀ, ಹುಮನಾಬಾದ್‍ನಲ್ಲಿ 28.97 ಮಿ.ಮೀ, ಚಿಟಗುಪ್ಪದಲ್ಲಿ 16.07 ಮಿ.ಮೀ, ಕಮಲನಗರದಲ್ಲಿ 26.07 ಮಿ.ಮೀ ಹಾಗೂ ಹುಲಸೂರು ತಾಲ್ಲೂಕಿನಲ್ಲಿ 39.20 ಮಿ.ಮೀ ಮಳೆಯಾಗಿದೆ.

ಔರಾದ್ ಪಟ್ಟಣದಲ್ಲಿ 29.20 ಮಿ.ಮೀ, ಚಿಂತಾಕಿಯಲ್ಲಿ 9.40 ಮಿ.ಮೀ, ಸಂತಪುರದಲ್ಲಿ 31.00 ಮಿ.ಮೀ, ಬೀದರ್ ನಗರದಲ್ಲಿ 8 ಮಿ.ಮೀ, ಬಗದಲ್‍ನಲ್ಲಿ 39.30 ಮಿ.ಮೀ, ಬೀದರ್ ದಕ್ಷಿಣದಲ್ಲಿ 8 ಮಿ.ಮೀ, ಜನವಾಡದಲ್ಲಿ 11 ಮಿ.ಮೀ, ಕಮಠಾಣದಲ್ಲಿ 35.20 ಮಿ.ಮೀ, ಮನ್ನಳ್ಳಿಯಲ್ಲಿ 26.60 ಮಿ.ಮೀ, ಭಾಲ್ಕಿ ಪಟ್ಟಣದಲ್ಲಿ 27.40 ಮಿ.ಮೀ, ಹಲಬರ್ಗಾದಲ್ಲಿ 20.10 ಮಿ.ಮೀ, ಖಟಕಚಿಂಚೋಳಿಯಲ್ಲಿ 29.00 ಮಿ.ಮೀ, ಲಖನಗಾಂವದಲ್ಲಿ 26.40 ಮಿ.ಮೀ, ನಿಟ್ಟೂರ(ಬಿ)ದಲ್ಲಿ 18.60 ಮಿ.ಮೀ, ಸಾಯಿಗಾಂವದಲ್ಲಿ 25.80 ಮಿ.ಮೀ ಮಳೆ ಸುರಿದಿದೆ.

ಬಸವಕಲ್ಯಾಣ ನಗರದಲ್ಲಿ 36 ಮಿ.ಮೀ, ಕೊಹಿನೂರಲ್ಲಿ 10 ಮಿ.ಮೀ, ಮಂಠಾಳದಲ್ಲಿ 29 ಮಿ.ಮೀ, ಮುಡಬಿಯಲ್ಲಿ 10 ಮಿ.ಮೀ, ರಾಜೇಶ್ವರದಲ್ಲಿ 40 ಮಿ.ಮೀ, ಹುಮನಾಬಾದ್ ಪಟ್ಟಣದಲ್ಲಿ 40.30 ಮಿ.ಮೀ, ದುಬಲಗುಂಡಿಯಲ್ಲಿ 20 ಮಿ.ಮೀ, ಹಳ್ಳಿಖೇಡ(ಬಿ)ದಲ್ಲಿ 26.60 ಮಿ.ಮೀ, ಚಿಟಗುಪ್ಪ ಪಟ್ಟಣದಲ್ಲಿ 20 ಮಿ.ಮೀ, ಬೇಮಳಖೇಡದಲ್ಲಿ 12.20 ಮಿ.ಮೀ, ನಿರ್ಣಾದಲ್ಲಿ 16 ಮಿ.ಮೀ, ಕಮಲನಗರದಲ್ಲಿ 17ಮಿ.ಮೀ, ದಾಬಕಾದಲ್ಲಿ 43.40 ಮಿ.ಮೀ, ಠಾಣಾಕುಶನೂರಿನಲ್ಲಿ 19 ಮಿ.ಮೀ ಹಾಗೂ ಹುಲಸೂರಿನಲ್ಲಿ 39.20 ಮಿ.ಮೀ ಮಳೆಯಾಗಿದೆ.

ಜುಲೈ 1ರಿಂದ 17ರ ವರೆಗೆ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ 208 ಮನೆಗಳು, ಬಸವಕಲ್ಯಾಣದಲ್ಲಿ 234, ಭಾಲ್ಕಿಯಲ್ಲಿ 45, ಬೀದರ್‍ನಲ್ಲಿ 107, ಚಿಟಗುಪ್ಪದಲ್ಲಿ 38, ಹುಮನಾಬಾದ್ನಲ್ಲಿ 30, ಕಮಲನಗರದಲ್ಲಿ 79 ಹಾಗೂ ಹುಲಸೂರು ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಕುಸಿದಿವೆ. ಒಟ್ಟು 753 ಮನೆಗಳು ಭಾಗಶಃ ಬಿದ್ದಿವೆ.