17ರಿಂದ ಪ್ರವಚನ ಆರಂಭ

ಶಹಾಪುರ:ಮಾ.16: ತಾಲೂಕಿನ ಹಾರಣಗೇರಾ ಗ್ರಾಮದ ನಂದಿ ಬಸವೇಶ್ವರ 6ನೇ ವರ್ಷದ ಜಾತ್ರೆ ನಿಮಿತ್ತ ಮಾ.17 ರಿಂದ 21 ರವರೆಗೆ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯ ಪೂಜ್ಯರಾದ ಈರಣ್ಣಶಾಸ್ತ್ರೀಗಳು ಹಾಗೂ ಕಲಬುರಗಿಯ ವಿದ್ಯಾ ಶ್ರೀದೇವಿ ಅವರಿ0ದ ಪ್ರವಚನ ಕಾರ್ಯಕ್ರಮ ಜರುಗಲಿದೆ. ಮಾ.17ರ0ದು ಹಿರಿಯ ಮುಖ0ಡರಾದ ಬಸವರಾಜಪ್ಪಗೌಡ ದರ್ಶನಾಪೂರ್ ಕಾರ್ಯಕ್ರಮ ಉದ್ಘಾಟಿಸುವರು. ಶಹಾಪುರದ ಚರಬಸವೇಶ್ವರ ಸ0ಸ್ಥಾನಮಠ ಗದ್ದುಗೆಯ ಬಸವಯ್ಯ ಶರಣರು, ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಸಾಮೀಜಿ ಅವರು ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಮಾ.21ರಂದು ರಾತ್ರಿ ದರ್ಶನಾಪೂರ್ ಮತ್ತು ಹಾರಣಗೇರಾ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗವುದು. ಮಾ.22ರಂದು ಬೆಳಿಗ್ಗೆ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಸಾಯಂಕಾಲ 6 ಗಂಟೆಗೆ ನಂದಿ ಬಸವೇಶ್ವರರ ಮಹಾರಥೋತ್ಸವ ಜರಗುತ್ತದೆ. ಬೋರಗಿಯ ವಿಶ್ವರಾಧ್ಯ ಮಠದ ಮಹಾಲಿಂಗೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸುವರು. ಮಾ.23 ರ0ದು ಜಂಗಿ ಕುಸ್ತಿ ಕಾಳಗ ಜರಗುಲಿದೆ.ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಗ ಜನತೆ ಭಾಗವಹಿಸಲು ವಿನಂತಿಸಿದ್ದಾರೆ