17ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥ ಅರುಣಾ ಭರ್ಜರಿ ಪ್ರಚಾರ

ಬಳ್ಳಾರಿ, ಏ.20: ನಗರದ 17ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಅರುಣಾ ಅವರು ಇಂದು ಭರ್ಜರಿ ಪ್ರಚಾರ ನಡೆಸಿದರು.
ಈ ಹಿಂದೆ ಕಾರ್ಪೊರೇಟ್ ಆಗಿದ್ದ ತಮ್ಮ ಮಾವ ಬಿ.ಕೆ.ಕೆರೆಕೋಡಪ್ಪ ಮತ್ತು ಪಕ್ಷದ ಕಾರ್ಯಕರ್ತರು ಬೆಂಬಲಿಗರೊಂದಿಗೆ ಇಲ್ಲಿನ ವಿಶಾಲನಗರ, ಹನುಮಾನ ನಗರದಲ್ಲಿ ಮನೆ ಮನೆ ತಿರುಗಿ ಮತಯಾಚನೆ ಮಾಡಿದರು.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಮ್ಮ ಮಾವ ಕೆರೆಕೋಡಪ್ಪ ಅವರು ವಾರ್ಡಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಮತದಾರರು ನನ್ನ ಗೆಲುವಿಗೂ ಮತ ನೀಡುವುದಾಗಿ ಭರವಸೆ ನೀಡುತ್ತಿರುವುದರಿಂದ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.