163 ಲೀ. ಅಕ್ರಮ ಮದ್ಯ ವಶ

ಚಿತ್ರದುರ್ಗ ಏ. 6;ಹಿರಿಯೂರು ತಾಲ್ಲೂಕಿನ ವೇಣುಕಲ್ಲುಗುಡ್ಡ ಗ್ರಾಮದ ಬಳಿಯ ತೋಟವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 163 ಲೀ. ಮದ್ಯವನ್ನು ಅಬ್ಬಿನಹೊಳೆ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.ವಶಪಡಿಸಿಕೊಂಡಿರುವ 163 ಲೀ. ಅಕ್ರಮ ಮದ್ಯ ಯಾರಿಗೆ ಸಂಬಂಧಿಸಿದ್ದು, ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ತಿಳಿಸಿದ್ದಾರೆ.