160 ಟನ್ ಆಮ್ಲಜನಕದ ೫ನೇ ರೈಲು ಆಗಮನ

ಬೆಂಗಳೂರು,ಮೇ.೨೦-ರಾಜ್ಯಕ್ಕೆ ೫ನೇ ಆಕ್ಸಿಜನ್ ಕಂಟೇನರ್ ತುಂಬಿದ ಎಕ್ಸ್‌ಪ್ರೆಸ್ ರೈಲು ಜಾರ್ಖಂಡ್‌ನ ಟಾಟಾನಗರದಿಂದ ಇಂದು ರಾತ್ರಿ ಆಗಮಿಸಿದೆ.
ರಾತ್ರಿ ೧.೫೫ರ ಸುಮಾರಿಗೆ ೮ ಕಂಟೈನರ್ ತುಂಬಿದ ೧೬೦ ಟನ್ ಆಕ್ಸಿಜನ್ ಹೊತ್ತ ರೈಲು ವೈಟ್ ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿದೆ ಎಂದು ದಕ್ಷಿಣ ನೈಋತ್ಯ ರೈಲ್ವೆ ತಿಳಿಸಿದೆ. ಈ ಸಂಬಂದ ಟ್ವೀಟ್ ಮಾಡಿರುವ ರೈಲ್ವೆ, ಇದುವರೆಗೆ ೫ನೇ ರೈಲು ಇದಾಗಿದ್ದು ರಾಜ್ಯಕ್ಕೆ ೬೪೦ ಮೆಟ್ರಿಕ್ ಟನ್ ಆಮ್ಲಜನಕವನ್ನು ರೈಲಿನಲ್ಲಿ ತರಲಾಗಿದೆ ಎಂದು ತಿಳಿಸಿದೆ.
ಒಟ್ಟಾರೆ ೬೪೦ ಟನ್ಆ ಗಮನ:
ಜಾರ್ಖಂಡ್ ಮತ್ತು ಒಡಿಶಾದಿಂದ ತಲಾ ೧೨೦ ಮೆಟ್ರಿಕ್ ಟನ್ ಹೊತ್ತ ೬ ಆಕ್ಸಿಜನ್ ಕಂಟೇನರ್ ಹೊತ್ತ ೪ ರೈಲುಗಳು ಬೆಂಗಳೂರಿಗೆ ಆಗಮಿಸಿದ್ದವು.
ಇವುಗಳಲ್ಲಿ ತಲಾ ಎರಡು ಜಾರ್ಖಂಡ್ ಮತ್ತು ಒಡಿಶಾದಿಂದ ಬಂದಿದ್ದು, ಇದುವೆರೆಗೆ ೪೮೦ ಮೆಟ್ರಿಕ್ ಟನ್ ಆಮ್ಲಜನಕ ಆಗಮಿಸಿತ್ತು.
ಇಂದು ಬಂದಿರುರುವ ೧೬೦ ಮೆಟ್ರಿಕ್ ಟನ್ ಸೇರಿದಂತೆ ೬೪೦ ಟನ್ ಮೆಟ್ರಿಕ್ ಟನ್ ಆಮ್ಲಜನಕ ಬಂದಂತೆ ಆಗಲಿದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ದೇಶದ ವಿವಿಧ ಭಾಗಗಳಿಗೆ ರೈಲುಗಳ ಮೂಲಕ ಆಮ್ಲಜನಕ ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.