16 ರಂದು ಶಿವಾನುಭವ ಚಿಂತನೆ ಗೋಷ್ಠಿ

ಕಲಬುರಗಿ, ಆ. 12: ಶ್ರಾವಣ ಮಾಸದ ಅಮವಾಸ್ಯೆ ಪ್ರಯುಕ್ತ ಆಗಸ್ಟ್ 16 ರಂದು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನೆ ಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆ ಅಬ್ಬೆತುಮಕೂರಿನವಿಶ್ವರಾಧ್ಯಮಠದಲ್ಲಿ ರಾತ್ರಿ8.30ಕ್ಕೆ 459 ನೆಯಗೋಷ್ಠಿ ನಡೆಯಲಿದ್ದು ಡಾ.ಗಂಗಾಧರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.ಜೇವರಗಿ ತಾಲೂಕಿನ ಶಾಖಾಪುರದ ವಿಶ್ವರಾಧ್ಯ ತಪೆÇೀವನ ಮಠದಲ್ಲಿ ರಾತ್ರಿ 8 ಕ್ಕೆ 349 ನೆಯ ಗೋಷ್ಠಿ ನಡೆಯಲಿದ್ದು ಡಾ. ಸಿದ್ಧರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಹಿರೇಮಠದಲ್ಲಿ ರಾತ್ರಿ 8ಕ್ಕೆ 294 ನೆಯ ಗೋಷ್ಠಿ ನಡೆಯಲಿದ್ದು ಡಾ.ರೇವಣಸಿದ್ಧ ಶಿವಾಚಾರ್ಯರು ನೇತೃತ್ವವಹಿಸುವರು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನಗುಡಿಯಿಂದ 1 ಕಿಮೀ ದೂರದಲ್ಲಿರುವ ಅಪ್ಪನ ಶಾಖಾಪುರ ಮಠದಲ್ಲಿ ಆ.21 ರಂದು ರಾತ್ರಿ 8.50 ಕ್ಕೆ ನಡೆಯುವ 276 ನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಅಬ್ಬೆತುಮಕೂರು ಮಠದ ಗಂಗಾಧರ ಮಹಾಸ್ವಾಮಿಗಳು ವಹಿಸುವರು ಎಂದು ವಿಶ್ವರಾಧ್ಯ ಸೇವಾ ಸಮಿತಿಯ ನಗರ ಘಟಕದ ವಕ್ತಾರ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ.