16 ರಂದು ಕಾಂಗ್ರೆಸ್ ಸೇವಾದಳದ ವಿಭಾಗಮಟ್ಟದ ಸಭೆ

ಕಲಬುರಗಿ ನ 14: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನ. 16 ರಂದು ಬೆಳಿಗ್ಗೆ 11. 30 ಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಕಲಬುರಗಿ ವಿಭಾಗ ಮಟ್ಟದ ಸಭೆ ನಡೆಯಲಿದೆ.
ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಬಲರಾಮಸಿಂಗ್ ಬದೌರಿಯಾ,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ರಾಮಚಂದ್ರ ಎಂ ಅವರು ಭಾಗವಹಿಸುವರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಅಧ್ಯಕ್ಷತೆ ವಹಿಸುವರು.
ಕಲ್ಯಾಣ ಕರ್ನಾಟಕದಲ್ಲಿ ಸೇವಾದಳದ ಸಂಘಟನೆ,ತರಬೇತಿ ಶಿಬಿರ ಮತ್ತು 2023 ರ ವಿಧಾನಸಭೆ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಕುಪೇಂದ್ರ. ಎಸ್ ಧೂಳೆ. ಕಿಣ್ಣಿಸುಲ್ತಾನ ಅವರು ತಿಳಿಸಿದ್ದಾರೆ.