16 ಜಿಲ್ಲೆಗಳ 200 ಕ್ರೀಡಾಪಟುಗಳು ಭಾಗಿರಾಜ್ಯಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಆರಂಭ

????????????????????????????????????

ಬೀದರ್:ನ.6: ಎರಡು ದಿನಗಳ ರಾಜ್ಯಮಟ್ಟದ 17ನೇ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನಶಿಪ್ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ಆರಂಭಗೊಂಡಿತು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಆಗಸದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಚಾಂಪಿಯನಶಿಪಗೆ ಚಾಲನೆ ನೀಡಿದರು.
ಸೈಕ್ಲಿಂಗ್ ಸೇರಿದಂತೆ ಯಾವ ಕ್ಷೇತ್ರದಲ್ಲೂ ಸಾಧನೆಗೆ ಕಿರುದಾರಿಗಳಿಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಬಹುದು ಎಂದು ಅವರು ನುಡಿದರು.
ಸ್ಪರ್ಧೆಯಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ಗಳಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಮುರಳಿಧರ ಎಕಲಾರಕರ್ ಮಾತನಾಡಿ, ಬರುವ ದಿನಗಳಲ್ಲಿ ಬೀದರನಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನಶಿಪ್ ಆಯೋಜಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನಶಿಪಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರ್, ಯಾದಗಿರಿ, ತುಮಕೂರು, ಬೆಂಗಳೂರು, ಧಾರವಾಡ, ಮೈಸೂರು, ಬಾಗಲಕೋಟೆ ಸೇರಿದಂತೆ ರಾಜ್ಯದ 16 ಜಿಲ್ಲೆಗಳ 200 ಕ್ರೀಡಾಪಟುಗಳು, ತರಬೇತುದಾರರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶೈಲ ಕುರ್ಣಿ ಮಾತನಾಡಿ, ಬೀದ???ನಲ್ಲಿ ಪ್ರತಿಭಾವಂತ ಸೈಕ್ಲಿಂಗ್ ಕ್ರೀಡಾಪಟುಗಳು ಇದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹಿರಿಮೆಯೂ ಅನೇಕರದ್ದಾಗಿದೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಸೋಲು, ಗೆಲುವು ಸ್ವಾಭಾವಿಕ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ವಿನೋದ್ ಸಿನ್ಹಾ ಹೇಳಿದರು.
ಸಿಪಿಐ ಕಪಿ???ದೇವ್, ಪಾಪನಾಶ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಶೆಟಕಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಒಬಿಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರರೆಡ್ಡಿ ಚಿಟ್ಟಾ, ಜೆಡಿಎಸ್ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವರಾಜ ಢಣಕೆ, ಉಪಾಧ್ಯಕ್ಷರಾದ ಆನಂದ ಕಾಶೆಂಪುರ, ಏಜಾಜ್ ಸೌದಾಗರ್, ಕಾರ್ಯದರ್ಶಿ ವಿನೋದ್ ಸಿನ್ಹಾ, ರಾಜ್ಯ ತಾಂತ್ರಿಕ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎ. ಗಫರ್, ಅನೂಪಕುಮಾರ ವರ್ಮಾ, ಎಂ.ಡಿ. ಫಯಾಜ್, ರಾಜಶೇಖರ ಗಾಯಗೊಂಡ, ಅರುಣಕುಮಾರ ಬಾವಗಿ, ವಿಶಾಲ್ ಮಾಳಗೆ, ಅಭಿಜೀತ್ ವಿ, ಅಂಬಾದಾಸ್ ಸಿಂಧೆ ಇದ್ದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೊಸಿಯೇಷನ್ ಹಾಗೂ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೊಸಿಯೇಷನ್ ವತಿಯಿಂದ ಸೈಕ್ಲಿಂಗ್ ಚಾಂಪಿಯನಷಿಪ್ ಹಮ್ಮಿಕೊಳ್ಳಲಾಗಿದೆ.


ಮೊದಲ ದಿನ ವೈಯಕ್ತಿಕ ಸ್ಪರ್ಧೆ
ರಾಜ್ಯಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನಶಿಪನಲ್ಲಿ ಮೊದಲ ದಿನ ವೈಯಕ್ತಿಕ ವಿಭಾಗದ ಸ್ಪರ್ಧೆಗಳು ನಡೆದವು.
14, 16, 18, 23 ವರ್ಷದ ಒಳಗಿನ ಹಾಗೂ 23 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಭಾನುವಾರ ಗುಂಪು ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಲಿದ್ದಾರೆ.