16 ಕ್ವಿಂಟಲ್  ಅಕ್ರಮ ಪಡಿತರ ಅಕ್ಕಿ ವಶ

ಸಂಜೆವಾಣಿ ವಾರ್ತೆಕೂಡ್ಲಿಗಿ. ಆ.29 :-  ಪಡಿತರವನ್ನು ಅಕ್ರಮವಾಗಿ ಸಂಗ್ರಹಿಸಿ ವಾಹನದಲ್ಲಿ ಬೇರೆಡೆ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 36 ಚೀಲಗಳಲ್ಲಿದ್ದ  47,509ರೂ ಮೌಲ್ಯದ 16 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕಾನಹೊಸಹಳ್ಳಿಯ ಉಜ್ಜಿನಿ ರಸ್ತೆಯಲ್ಲಿ ಭಾನುವಾರ ನಡೆದಿದೆ.ಕಾನಹೊಸಹಳ್ಳಿ ಗ್ರಾಮದ ಮುದ್ದಪ್ಪ ಎನ್ನುವವರು ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಗೋದಾಮಿನಲ್ಲಿಟ್ಟು ಚೀಲಗಳಿಗೆ ತುಂಬಿಸಿ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಎಎಸೈ ಎಸ್.ಕೆ.ಜಿಲಾನ್ ಸೇರಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಪಡಿತರ ಅಕ್ಕಿ ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಹಾರ ನಿರೀಕ್ಷಕ ಆರ್.ಅಜಿತ್ ಕುಮಾರ್ ನೀಡಿದ ದೂರಿನನ್ವಯ ಮುದ್ದಪ್ಪ ಮತ್ತು ಶರಣಪ್ಪ ಎಂಬುವವರ ವಿರುದ್ಧ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.