16ರಿಂದ ವಿದ್ಯುತ್ ನೌಕರರ ಮುಷ್ಕರ

ಕಲಬುರಗಿ ,ಮಾ 14: ವೇತನ ಪರಿಷ್ಕರಣೆ ಜಾರಿಗೆ ಆಗ್ರಹಿಸಿ ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂಗಳ ಅಧಿಕಾರಿಗಳು ಮತ್ತು ನೌಕರರು ಮಾ. 16 ರಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಲಿದ್ದಾರೆ.ಜೆಸ್ಕಾಂ ನಿಗಮ ಕಛೇರಿಯಲ್ಲಿ ಸೋಮವಾರ ಸಂಜೆ ನಡೆದ ದ್ವಾರ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ಕವಿಪ್ರನಿನಿ ಅಧಿಕಾರಿಗಳು ಹಾಗೂ ನೌಕರರಒಕ್ಕೂಟದ ಅಧ್ಯಕ್ಷ ಬಾಬು ಕೋರೆ,ವಿಶ್ವನಾಥ ರೆಡ್ಡಿ, ಬಿ ಆರ್ ಬುದ್ದಾ, ಅಬ್ದುಲ್ ವಾಜಿದ, ಸಂತೋಷ
ಅಡಕಿ, ಆರ್ ಡಿ ಚಂದ್ರಶೇಖರ ಕವಿಮಂ ಇಂಜನೀಯರ ಸಿಇಇ
ಸಂಘದ ವಲಯ ಅಧ್ಯಕ್ಷರು ಮತ್ತು ಸಂಘದಸಂಘಟನಾ ಕಾರ್ಯದರ್ಶಿ, ಕೇಂದ್ರ ಕಾರ್ಯಾಕಾರಿಗಳುಮತ್ತು ಅಧಿಕಾರಗಳು ಮತ್ತು ನೌಕರರು
ಇದ್ದರು.