
ಬೀದರ್:ಮಾ.10: ಈ ತಿಂಗಳ 16ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ “ಸ್ವರ್ಣಿಮ ಭಾರತದ ಬೂನಾದಿ-ಶಾಶ್ವತ ಯೋಗಿಕ ಕೃಷಿ” ಕುರಿತು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ತಿಳಿಸಿದರು.
ಇಂದು ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಹಮ್ಮಿಕೊಂಡ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮವನ್ನು ಬ್ರಹ್ಮಾಕುಮಾರಿಸ್ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿರುವ ಕೃಷಿ ಹಾಗೂ ಗ್ರಾಮ ವಿಕಾಸ ಪ್ರಭಾರದ ಉಪಾಧ್ಯಕ್ಷರಾದ ರಾಜಯೋಗಿ ಬಿ.ಕೆ ರಾಜು ಭಾಯಿ ಅವರು ಉದ್ಘಾಟಿಸಲಿದ್ದು, ಕೇಂದ್ರದ ಸಂಚಾಲಕರಾದ ತಾನು ಸಾನಿಧ್ಯ ವಹಿಸಲಿದ್ದೇನೆ. ಮುಖ್ಯ ಅತಿತೀಗಳಾಗಿ ಪಶು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ ವೀರಣ್ಣ, ಅತಿಥಿಗಳಾಗಿ ಕೃಷಿ ಇಲಾಖೆಯ ಜಂಟಿ ನಿದೇಶಕ ಡಾ.ರತೇಂದ್ರನಾಥ ಸೂಗೂರ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಆಗಮಿಸಲಿದ್ದಾರೆ.
ಹಾಗೇ ಅಂದು ಸಂಜೆ 5 ಗಂಟೆಗೆ ನಗರದ ಹೊರವಲಯದಲ್ಲಿರುವ ಜ್ಞಾನಸೂಧಾ ಸ್ಕೂಲ್ ಬಳಿಯ ಕುಂಚಗೆ ಲೆಔಟ್‍ನಲ್ಲಿರುವ ಓಂನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬ್ರಹ್ಮಾಕುರಿಸ್ ಈಶ್ಚವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರದ ಉದ್ಘಾಟನೆ ಸಮಾರಂಭ ಜರುಗುವುದು. ಈ ಕಾರ್ಯಕ್ರಮವನ್ನು ಸಹ ಬ್ರಹ್ಮಾಕುಮಾರಿಸ್ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿರುವ ಕೃಷಿ ಹಾಗೂ ಗ್ರಾಮ ವಿಕಾಸ ಪ್ರಭಾರದ ಉಪಾಧ್ಯಕ್ಷರಾದ ರಾಜಯೋಗಿ ಬಿ.ಕೆ ರಾಜು ಭಾಯಿ ಅವರು ಉದ್ಘಾಟಿಸುವರು. ಭಾತಂಬ್ರಾ ಶ್ರೀಗಳಾದ ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಜಿ ಸಾನಿಧ್ಯ ವಹಿಸುವರು. ಸ್ಥಳಿಯ ಶಾಸಕ ರಹಿಮ್ ಖಾನ್, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಅತಿಥಿಗಳಾಗಿ ಭಾಗವಹಿಸುವರು ಎಂದು ಬಿ.ಕೆ ಪ್ರತಿಮಾ ಬಹೆನ್‍ಜಿ ಹೇಳಿದರು.
ಕೇಂದ್ರದ ಹಿರಿಯ ಪ್ರವರ್ತಕರಾದ ಬಿ.ಕೆ ಪ್ರಭಾಕರ ಕೋರವಾರ ಹಾಗೂ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ದಕನವರು ಪತ್ರಿಕಾಗೋಷ್ಟಿಯಲ್ಲಿದ್ದರು.