16ನೇ ದಿನಕ್ಕೆ ಕಾಲಿಟ್ಟಿದೆ ಬೇಡ ಜಂಗಮರ ಹೋರಾಟ

ಬೀದರ್:ಜು.26: ಕಳೆದ ಹಲವು ದಶಕಗಳಿಂದ ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ನಡೆಯುತ್ತಿರುವ ಹೋರಾಟ 16ನೇ ದಿನಕ್ಕೆ ಬೀದರ್ ಜಿಲ್ಲೆಯಲ್ಲಿ ಕಾಲಿಟ್ಟಿದೆ.ರಾಜಧಾನಿಯ ಪ್ರಿಡಂ ಪಾರ್ಕನಿಂದ ಶುರುವಾದ ಪ್ರತಿಭಟನೆ ದೂರದ ರಾಜ್ಯದ ಕಿರಿಟ ಬೀದರ್ ಗೂ ತಟ್ಟಿದೆ.

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಕಳೆದ 16ದಿನದಿಂದ ಧರಣಿ ಸತ್ಯಾಗೃಹ ನಡೆಸುತ್ತಿರುವ ಜಂಗಮ ಸಮಾಜ ಬಾಂಧವರು ಜಂಗಮ ಪ್ರಮಾಣ ಪತ್ರಕ್ಕೆ ಆಗ್ರಹಿಸಿದ್ದಾರೆ.ಈ ಕುರಿತ ವರದಿಹೀಗೆ ಟೆಂಟ್ ಹಾಕಿ ಪ್ರತಿಭಟನೆ ಮಾಡುತ್ತಿರುವ ಇವರು ಜಂಗಮ ಸಮಾಜದ ಜನರು.ವೀರಶೈವ ಲಿಂಗಾಯತ್ ಸಮಾಜದಲ್ಲಿ ಯಾರೆ ಸಾವನ್ನಪ್ಪಲ್ಲಿ ಅವರ ಶವಕ್ಕೆ ಸ್ನಾನ ಮಾಡಿಸಿ ಶವಕ್ಕೆ ಮುಕ್ತಿ ಕೊಡುವ ಕಾಯಕ ಇವರದ್ದು.ಕಳೆದ 16ದಿನದಿಂದ ರಾಜ್ಯದಲ್ಲಿ ಬೆಂಗಳುರು ಟೂ ಬೀದರ್ ವರೆಗೆ ನಿರಂತರ ಸತ್ಯ ಪ್ರತಿಪಾದನೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸರ್ಕಾರ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ಸಂವಿಧಾನ ಬದ್ದವಾಗಿ ನಮಗೆ ಸಿಗಬೇಕಾದ ಬೇಡ ಜಂಗಮ ಪ್ರಮಾಣ ಪತ್ರವನ್ನ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.ಈಗಾಗಲೆ ಸಾವಿರಾರು ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಲಾಗಿದೆ.ಆದ್ರೆ ವಿನಾ ಕಾರಣ ಇಗ ಅದನ್ನ ತಡೆ ಹಿಡಿದಿದ್ದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ರಾಜಧಾನಿ ಪ್ರೀಡಂ ಪಾರ್ಕನಲ್ಲಿ ರಾಜ್ಯ ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಬಿ.ಡಿ.ಹಿರೇಮಠ ನೇತ್ರತ್ವದಲ್ಲಿ ನಡೆಯುತ್ತಿರುವ ಹೋರಾಟದ ಕಿಚ್ಚು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಬ್ಬಿದೆ.ಹುಮನಾಬಾದ್ ತಹಸಿಲ್ದಾರ ಕಚೇರಿ ಆವರಣದಲ್ಲಿ ಹೋರಾಟ ಮುಂದುವರೆದಿದೆ.

ಆರಂಭಲ್ಲಿ ತಲೆ ಬೊಳಿಸಿಕೊಂಡು ಸರ್ಕಾರದ ವಿರುದ್ದ ಅಕ್ರೋಶ ಹೊರ ಹಾಕಿದ್ದರು.ಈ ಬಗ್ಗೆ ಮಾತನಾಡಿದ ಪ್ರತಿಯೊಬ್ಬರು ಅಂಬೇಡ್ಕರ್ ಸಂವಿಧಾನದಲ್ಲೆ ಬೇಡ ಜಂಗಮರ ಪ್ರಮಾಣ ಪತ್ರ ನೀಡಲು ಸೂಚಿಸಿದ್ದರೆ.ಆದ್ರೆ ಇಲ್ಲಿಯ ವರೆಗೆ ಅದಕ್ಕೆ ಅಡೆ ತಡೆ ಹಾಕೋದು ಸರಿಯಲ್ಲ ಅಂತಾರೆ ಸುಭಾಷ.

ಒಟ್ಟಾರೆ ಬೇಡ ಜಂಗಮ ಪ್ರಮಾಣ ಪತ್ರ ಹೋರಾಟ ದಿನದಿಂದ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದೆ.ಈಗಲಾದ್ರು ಸರ್ಕಾರ ಕೂಡಲೆ ಎಚ್ಚೆತ್ತು ಬೇಡ ಜಂಗಮ ಪ್ರಮಾಣ ಪತ್ರದ ರತಹದಾರಿ ಸುಗುಮ ಮಾಡುವ ಅವಶ್ಯಕತೆ ಇದೆ.