1,57,718 ಕೋಟಿ ರೂ ದಾಖಲೆ ಜಿಎಸ್ ಟಿ ಸಂಗ್ರಹ

ನವದೆಹಲಿ, ನ.1-ಕಳೆದ ತಿಂಗಳು ಅಕ್ಟೋಬರ್‌ನಲ್ಲಿ 1,51,718 ಕೋಟಿ ರೂ. ಜಿಎಸ್ ಟಿ ಸಂಗ್ರಹ ವಾಗಿದೆ. ದೇಶದಲ್ಲಿ ಜಿಎಸ್ ಟಿ ಅನುಷ್ಠಾನಕ್ಕೆ ಬಂದ ಬಳಿಕ ಎರಡನೇ ಅತಿ ದೊಡ್ಡ ತೆರಿಗೆ ಸಂಗ್ರಹ ಇದಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 2022ರ ಏಪ್ರಿಲ್ ನಂತರದ ದೇಶೀಯ ವಹಿವಾಟುಗಳಿಂದ ಜಿಎಸ್ ಟಿ ಸಂಗ್ರಹವಾಗಿದೆ. ಇದು ಒಂಬತ್ತನೇ ತಿಂಗಳು ಮತ್ತು ಸತತ ಎಂಟು ತಿಂಗಳುಗಳವರೆಗೂ ಮಾಸಿಕ ಜಿಎಸ್‌ಟಿ ಆದಾಯ 1.4ಲಕ್ಷ ಕೋಟಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 2022 ರಲ್ಲಿ 8.3 ಕೋಟಿ ಇ-ವೇ ಬಿಲ್‌ಗಳನ್ನು ರಚಿಸಲಾಗಿದೆ. ಇದು ಆಗಸ್ಟ್ 2022 ರಲ್ಲಿ ಉತ್ಪತ್ತಿಯಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಗಮನಾರ್ಹ ಏರಿಕೆ ಕಂಡಿದೆ.
ಕಳೆದ ತಿಂಗಳು ಜಿಎಸ್ ಟಿ ಆದಾಯದಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆಯಿಂದ 26,039 ಕೋಟಿ ರೂ, ರಾಜ್ಯ ಸರಕು ಮತ್ತು ಸೇವಾ ತೆರಿಗೆಯಿಂದ 33,396 ಕೋಟಿ ರೂ, ಸಮಗ್ರ ಸರಕು ಹಾಗೂ ಸೇವಾ ತೆರಿಗೆಯಿಂದ 81,788, ಸರಕುಗಳ ಆಮದಿನ ಮೇಲೆ 37,297 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಅಂಕಿ ಅಂಶ ನೀಡಿದೆ. ಇದರ ಜೊತೆಗೆ 10,505 ಕೋಟಿ ಸೆಸ್ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.