
ಬೀದರ್: ಸೆ.3:ಹದಿಮೂರು ವರ್ಷ ಹಿಂದೆ ಕೇವಲ 1500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದ್ವಿತೀಯ ದರ್ಜೆ ಭೂಮಾಪಕನೊಬ್ಬನಿಗೆ ಜಿಲ್ಲಾ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೆÇಲೀಸರ ಬಲೆಗೆ ಬಿದ್ದಿದ್ದ ಬಸವಕಲ್ಯಾಣ ತಹಸೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ್ ಬಡೇಸಾಬ್ಗೆ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಬುಧವಾರ ಮೂರು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಕೇವಲ 1500 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಕ್ಕೆ ಅಬ್ದುಲ್ ರಹೀಮ್ ಸೆರೆವಾಸ ಅನುಭವಿಸಬೇಕಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದ ಶೆಟ್ಟಿ ಶಿಕ್ಷೆ ಪ್ರಕಟಿಸಿದರು.
ಉಜಳಂಬ ಗ್ರಾಮದ ಸರ್ವೇ ನಂ.25ರ 17.27 ಎಕರೆ ಕೃಷಿ ಜಮೀನನ್ನು ಒಟ್ಟುಗೂಡಿಸಲು ಬಸವಕಲ್ಯಾಣ ತಾಲೂಕಿನ ಹೊನ್ನಾಳ್ಳಿಯ ದಿಲೀಪ ಕಿಶನರಾವ್ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಭೂಮಾಪಕ ಅಬ್ದುಲ್ ರಹೀಮ್ 1500 ರೂ. ಲಂಚದ ಬೇಡಿಕೆ ಇಟ್ಟಿದ್ದ.
ದಿಲೀಪ ಅವರಿಂದ 2010ರ ಫೆ.10ರಂದು ಹಣ ಪಡೆಯುವಾಗ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿದಾಗ ಸಿಂದಬಂದಗಿಯ ಅಬ್ದುಲ್ ರಹೀಮ್ ಸಿಕ್ಕಿಬಿದ್ದಿದ್ದರು. ಬೀದರ್ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೆÇಲೀಸ್ ನಿರೀಕ್ಷಕ ಆರ್.ಎಸ್. ಜಹಾಗೀರದಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧ ಸಾಬೀತಾಗಿದ್ದರಿಂದ ತೀರ್ಪು ನೀಡಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ಸಾವಿರ ದಂಡ ವಿಧಿಸಿದೆ. ತಪ್ಪಿದ್ದಲ್ಲಿ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದರು.