15.568 ಅಡಿ ಪರ್ವತ ಏರಿಳಿದ ಚಿತ್ರದುರ್ಗದ ಹಳ್ಳಿ ಹೈದ!

 ಚಿತ್ರದುರ್ಗ.ಅ.೧೮; ತಾಲ್ಲೂಕಿನ ಅನ್ನೆಹಾಳ್ ಭೋವಿಕಾಲೋನಿ ಗ್ರಾಮದ ಧನರಾಜ್ 15, 568 ಅಡಿ ಪರ್ವತ ಏರಿಳಿದ ನಮ್ಮ ಚಿತ್ರದುರ್ಗದ ಹಳ್ಳಿ ಹೈದ!ಪರ್ವತಾರೋಹಣ ಮುಗಿಸಿ ವಾಪಾಸಾದ ಗ್ರಾಮೀಣ ಪ್ರತಿಭೆ. ಯುವ ಸಬಲೀಕರಣ ಕ್ರೀಡಾ ಕೂಟ ಇಲಾಖೆಯ ಸಹ ಯೋಗದಲ್ಲಿ ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆಮಿ ಸಂಸ್ಥೆಯು 38 ಜನ ಸಾಹಸಿಗಳನ್ನು ಆಯ್ಕೆ ಮಾಡಿತ್ತು ಅದರಲ್ಲಿ ಧನರಾಜನು ಒಬ್ಬ ಈ 38 ಜನರ ತಂಡ ಕಳೆದ ಸೆಪ್ಟೆಂಬರ್ 24 ರಂದು ಯಶ್ವಂತಪುರದಿಂದ ತೆರಳಿ ದೆಹಲಿಗೆ ಪ್ರಯಾಣ ಬೆಳೆಸಿ ಜಮ್ಮು ಮತ್ತು ಕಾಶ್ಮೀರದ ಪೆಹಾಲ್ಗ್ಂನ ಜವಾಹಾರ್ ಇನ್ಸುಟ್ಯೂಟ್ ಆಪ್ ಮೌಂಟರಿಂಗ್ ಅಂಡ್ ವಿಂಟರ್ ಸ್ಪೋಟ್‌ನಲ್ಲಿ 10ದಿನ ತರಬೇತಿ ಅವಧಿಯಲ್ಲಿ ಬೇಸ್ ಕ್ಯಾಂಪ್‌ನಿAದ ಹೊರಟು ಟಾಟಾಕೂಟಿ ಪರ್ವತ ಏರಲು ಪ್ರಾರಂಭಿಸಿದ್ದು ಒಟ್ಟು 23ಗಂಟೆಯೊಳಗೆ 15, 568 ಅಡಿ ಪರ್ವತವನ್ನು ಅಕ್ಟೋಬರ್ 2 ರಂದು ಗಾಂಧಿಜಯAತಿಯ ದಿನದಂದು ಟಾಟಾಕೂಟಿ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಹಿಂದೆ ಧನರಾಜ್ 2019ರಲ್ಲಿ ಜಮ್ಮುಕಾಶ್ಮೀರದ ಸೋನಾಮರ್ ಬೇಸಿಕ ಹಿಮಾಲಯ ಪರ್ವತ ಏರುವುದಕ್ಕೆ ಆಯ್ಕೆಯಾಗಿದ್ದರು. 13500 ಅಡಿ ಏರಿಳಿದು ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ. ಇದರ ಆಧಾರದ ಮೇಲೆ ದಂಡೆಯಾತ್ರೆಗೆ ಆಯ್ಕೆಯಾಗಿದ್ದ ಕೋವಿಡ್ ಹಿನ್ನಲೆಯಲ್ಲಿ ತೆರಳಲು ಅವಕಾಶ ಕೊಟ್ಟಿರಲಿಲ್ಲ ಈ ಬಾರಿ ಕರೋನ 2ನೇ ಅಲೆ ನಿಯಂತ್ರಣಗೊAಡು ಜನಜೀವನ ಸಹಜ ಸ್ತಿತಿಗೆ ಬಂದಾಗ ಅಕಾಡಮೆಯಿಂದ ಸೆಪ್ಟೆಂಬರ್ 24ರಂದು ಪರ್ವತಾರೋಹ ಶಿಬಿರಕ್ಕೆ ಬನ್ನಿ ಎಂದು ಕರೆಬಂದಿತ್ತು. 2ವರ್ಷದಿಂದ ಮನೆಯಲ್ಲಿದ್ದ ಕಾರಣ ದಿಕ್ಕುತೋಚದಂತಾಗಿತ್ತು. ಸದಾವಕಾಶ ಕಳೆದುಕೊಳ್ಳಬಾರದೆಂದು ನಾನು ನಿರ್ಧರಿಸಿ ದಂಡೆಯಾತ್ರೆಗೆ ಹೋಗಿ ಜಮ್ಮು ಮತ್ತು ಕಾಶ್ಮೀರದ ಪೆಹಾಲ್ಗಾಂನ ಮೌಂಟ್ ಟಾಟಾಕೂಟಿ ಎಂಬ ಪರ್ವತವನ್ನು 15,568 ಅಡಿ ಎರಿಳಿದು ಸಂಪೂರ್ಣಗೊಳಿಸಿದ್ದಾನೆ. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಸಾಧಿಸ ಚಲವಿದ್ದರೆ ಆ ಗುರಿಯನ್ನು ಮುಟ್ಟಬಹುದು ಎಂಬುದಕ್ಕೆ ಚಿತ್ರದುರ್ಗದ ಧನರಾಜ್ ಸಾಕ್ಷಿಯಾಗಿ ನಿಲ್ಲುತ್ತಾನೆ. ಮುಂದಿನ ನನ್ನ ಚಲ ಅಡ್ವಾನ್ಸ್ಗೆ ಹೋಗಿ ಅದನ್ನು ಯಶಸ್ವಿಗೊಳಿಸಿಕೊಂಡು ಮುಂದೆ ಆರ್ಮಿಗೆ ಹೋಗುವ ಚಲವನ್ನು ಹೊಂದಿದ್ದಾನೆ.