15 ಹಳ್ಳಿಗಳಲ್ಲಿ 10 ಸಾವಿರ ಸಸಿ ನೆಡುವ ಗುರಿ:ಭಗವಂತರಾವ್ ಪಾಟೀಲ್

ಸೇಡಂ, ಜು 31: 2025 ರಲ್ಲಿ ನಡಿಯಲ್ಲಿರುವ ಸ್ವರ್ಣ ಜಯಂತಿಯ ಅಂಗವಾಗಿ 15 ಹಳ್ಳಿಗಳಲ್ಲಿ 10 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು ಎಂದು ಸ್ವರ್ಣ ಜಯಂತಿಯ ಕಾರ್ಯಸ್ಥಳದ ಪ್ರಮುಖರಾದ ಭಗವಂತರಾವ್ ಪಾಟೀಲ್ ಕೊಂಕನಳ್ಳಿ ಹೇಳಿದರು. ತಾಲೂಕಿನ ಯಡಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಿಬ್ಬಳ್ಳಿ ಆದರ್ಶ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪರಿಸರದ ಬಗ್ಗೆ ಅರಿವು ಮೂಡಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದಿನಬಳಕೆ ಗಿಡಗಳನ್ನು ವಿತರಣೆ ಮಾಡಲಾಯಿತು. ಈ ವೇಳೆಯಲ್ಲಿ ಶಾಲೆಯ ಮುಖ್ಯಾಗುರುಗಳಾದ ಮಲ್ಲಿನಾಥ್ ರೆಡ್ಡಿ ಗುರುಪಾದಪ್ಪ ಪಾಟೀಲ್ ಶರಣು ಕೇಶ್ವಾರ್ ಮತ್ತು ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಇದ್ದರು.