15 ವರ್ಷಗಳ ನಂತರ ಒಲಿದುಬಂತು ಪರೀಕ್ಷಾ ಕೇಂದ್ರ

ಕರಜಗಿ : ಆ.22:ಅಫಜಲಪುರ ತಾಲೂಕಿನ ಕರಜಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು 15 ವರ್ಷಗಳಿಂದ ಪ್ರಾರಂಭವಾಗಿದ್ದು, ಪ್ರತಿ ವರ್ಷವೂ ಪರೀಕ್ಷೆ ಬರೆಯಲು 25 ಕೀ.ಮೀಟರ್ ದೂರದ ಅಫಜಲಪುರಕ ಪಟ್ಟಣಕ್ಕೆ ಹೋಗಿ ಪರೀಕ್ಷೆ ಬರೆಯಬೇಕಾಗಿತ್ತು. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತಿತ್ತು, ಆದರೆ ಇಲ್ಲಿನ ಮಕ್ಕಳ ಪ್ರತಿ ವರ್ಷದ ಮನವಿಯನ್ನು ಸ್ಪಂದಿಸಿದ ಪ್ರಾಂಶುಪಾಲರ ಸತತ ಪ್ರಯತ್ನದಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪರೀಕ್ಷಾ ಕೇಂದ್ರ ಲಭಿಸಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು ಕರಜಗಿಗೆ ಸುತ್ತಮುತ್ತಲಿನ ಹಳ್ಳಿಯ ಜೊತೆಗೆ ನೆರೆಯ ರಾಜ್ಯ ಮಹಾರಾಷ್ಟ್ರದ ವಿದ್ಯಾರ್ಥಿಗಳು ಕೂಡಾ ಇಲ್ಲಿ ಪ್ರವೇಶ ಪಡೆಯುತ್ತಾರೆ ಪರೀಕ್ಷಾ ಕೇಂದ್ರ ಇಲ್ಲಿ ಲಭಿಸಿರುವುದು ವಿದ್ಯಾರ್ಥಿಗಳು ತುಂಬಾ ಅನುಕೂಲವಾಗುತ್ತದೆ.

ಈ ಬಾರಿ ಸರಕಾರಿ ಪ್ರಥಮ ದರ್ಜೆ ಕರಜಗಿ ಕಾಲೇಜಿನಲ್ಲಿಯೇ ಒಟ್ಟು 113 ವಿದ್ಯಾರ್ಥಿಗಳಲ್ಲಿ 103 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದು ನಿಟ್ಟುಸಿರು ಬಿಟ್ಟು ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು .

ಈ ಕಾರ್ಯದಲ್ಲಿ ಕಾಲೇಜಿನ ಎಲ್ಲಾ ಸಹೋದರ ಸಮಾನರಾದ ಸಹ ಸಿಬ್ಬಂದಿಗಳು ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಹಾಗೂ ಗ್ರಾಮದ ಗಣ್ಯರೆಲ್ಲರಿಗೂ ಹೃದಯಪೂರ್ವಕ ನಮನಗಳು ಸಲ್ಲಿಸಿದರು.

ವಿಶೇಷವಾಗಿ ನನ್ನ ಕಾಲೇಜಿನ ಮುದ್ದು ಮಕ್ಕಳ ಸಮಾನರಾದ ಹಾಗೂ ಸಮಾಧಾನ ಚಿತ್ತದಿಂದ ಯಾವ ಗಲಿಬಿಲಿಯು ಇಲ್ಲದೆ ಅತ್ಯಂತ ಸೌಜನ್ಯತೆಯಿಂದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶರಣಬಸಪ್ಪ ಅವಟೆ ಧನ್ಯವಾದ ಸಲ್ಲಿಸಿದರು.

ಇದೆ ಸಂಧರ್ಬದಲ್ಲಿ ಡಾ. ಶರಣಪ್ಪ ಭೋವಿ, ಮಲ್ಲಿಕಾರ್ಜುನ ಮರದ್ದಿ, ಮರೆಮ್ಮ ಹೊಸಮನಿ, ಕೃಷ್ಣ ಸಿಂಗೆ, ರಾಜಪ್ಪ ಕೊಣಿಮನಿ, ನಾಗರಾಜ ಬಡಿಗೇರ, ಪವಿತ್ರಾ ಪ್ರಸಾದ, ಡಾ. ರಾಜೇಶ್ ಆಲಮೇಲಕರ್, ಡಾ. ಗುಂಡಪ್ಪ ಶಿಂಗೆ, ಗಂಟೆಪ್ಪ ಪಾತೊಳಿ, ರಮೇಶ ಮುಗಳಿ ಎಲ್ಲರೂ ಸೇರಿ ಪರೀಕ್ಷೆ ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.