15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಜೇವರ್ಗಿ,ನ.4-ತಾಲೂಕಿನ ಗುಡೂರ ಎಸ್.ಎ. ಗ್ರಾಮದ ಪ್ರಭು ಅಲಿಯಾಸ್ ಕಾಶಿನಾಥ, ಸುಜಾತಾ ಪ್ರಭು, ವಿನೋದ ಪ್ರಭು ಒಟ್ಟು ಮೂವರು .25.08.2022 ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಸಿರಾ-ತೂಮಕೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನೀಧಿ ಮೂಲಕ ತಾಲೂಕಿನ ತಹಶಿಲ್ದಾರರೊಂದಿಗೆ 15 ಲಕ್ಷ ರೂ. ಮೊತ್ತದ ಚೆಕ್‌ನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ನೀಡಿದರು.
ಇದೇ ಸಂದರ್ಭದಲ್ಲಿ ಕುಟುಂಬಕ್ಕೆ ಖುದ್ದು ಸಾಂತ್ವನ ಹೇಳಿದ ಡಾ. ಅಜಯ್ ಸಿಂಗ್ ಅವರು, ಪರಿಹಾರ ರೂಪದಲ್ಲಿ ಬಂದ ಹಣವನ್ನು ಸರಿಯಾಗಿ ಬಳಕೆ ಮಾಡುವಂತೆ ಕುಟುಂಬ ಸದಸ್ಯರಿಗೆ ಕಿವಿಮಾತು ಹೇಳಿದರು.
ಈ ವೇಳೆ ತಾಲೂಕಿನ ತಹಶಿಲ್ದಾರರು, ಕಾಂಗ್ರೆಸ್ ಹಿರಿಯ ಮುಖಂಡರು ರಾಜಶೇಖರ್ ಸಿರಿ, ಮೆಹಮ್ಮೂದ್ದನೂರಿ, ಮಲ್ಲನಗೌಡ ಮಾಲಿಪಾಟೀಲ್ ಸಲಿಮ್ ಕನ್ನಿ, ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.