15 ನೇ ಹಣಕಾಸು ವರದಿ: ನವಂಬರ್ 9 ರಾಷ್ಟ್ರಪತಿಗಳಿಗೆ ಸಲ್ಲಿಕೆ

ನವದೆಹಲಿ, ಅ‌‌.30- ಹದಿನೈದನೇ ಹಣಕಾಸು ಆಯೋಗ , 2021 ರಿಂದ 2026ರ ವರದಿಯನ್ನು ನವೆಂಬರ್ 9 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಿದೆ.

ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಮತ್ತು ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಝಾ, ಪ್ರೊ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಅವರು ವರದಿ ಅಂತಿಮ ಗೊಳಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

ಆಯೋಗ ವರದಿಯ ಪ್ರತಿಯನ್ನು ಮುಂದಿನ ತಿಂಗಳ ಕೊನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಸಲ್ಲಿಸಲಿದೆ.

ಈ ವರದಿಯನ್ನು ಕೇಂದ್ರ ಹಣಕಾಸು ಸಚಿವರು ಸರ್ಕಾರದ ಕ್ರಮ ಕೈಗೊಂಡ ವರದಿಯೊಂದಿಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

2021-22 ರಿಂದ 2025-26ರ 5 ಹಣಕಾಸು ವರ್ಷಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ವರದಿ ಒಳಗೊಂಡಿದೆ. 2019 ರ ಡಿಸೆಂಬರ್‌ನಲ್ಲಿ ರಾಷ್ಟ್ರಪತಿಯವರಿಗೆ ಸಲ್ಲಿಸಲಾದ 2020-21ನೇ ಸಾಲಿನ ಹದಿನೈದನೇ ಹಣಕಾಸು ಆಯೋಗದ ವರದಿಯನ್ನು ಸರ್ಕಾರ ಸಂಸತ್ತಿನಲ್ಲಿ ಕ್ರಮ ಕೈಗೊಂಡ ವರದಿಯೊಂದಿಗೆ ಮಂಡಿಸಿತ್ತು.

ಸಂವಿಧಾನದ 280 ನೇ ವಿಧಿಯ ಕಲಂ (1) ರ ಅನುಸಾರ ಹದಿನೈದನೇ ಹಣಕಾಸು ಆಯೋಗವನ್ನು ಗೌರವಾನ್ವಿತ ರಾಷ್ಟ್ರಪತಿಯವರು ರಚಿಸಿದ್ದಾರೆ.

ಹಣಕಾಸು ಆಯೋಗ -ವಿವಿಧ ನಿಬಂಧನೆಗಳು ಕಾಯ್ದೆ 1951 (1951 ರ 33) ರ ನಿಬಂಧನೆಗಳೊಂದಿಗೆ ಎನ್.ಕೆ. ಸಿಂಗ್ ಅಧ್ಯಕ್ಷರಾಗಿ, ಶಕ್ತಿಕಾಂತ ದಾಸ್, ಡಾ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಸದಸ್ಯರಾಗಿ ಮತ್ತು ಕಾರ್ಯದರ್ಶಿಯಾಗಿ ಅರವಿಂದ್ ಮೆಹ್ತಾ ಅವರನ್ನು ನೇಮಿಸಲಾಗಿತ್ತು

ಶಕ್ತಿಕಾಂತ ದಾಸ್ ಅವರಿಂದ ತೆರವಾದ ಸದಸ್ಯ ಸ್ಥಾನಕ್ಕೆ . ಅಜಯ್ ನಾರಾಯಣ್ ಝಾ ಅವರನ್ನು ನೇಮಿಸಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿವಿಧ ಹಂತಗಳ ಸ್ಥಳೀಯ ಆಡಳಿತಗಳು, ಹಿಂದಿನ ಹಣಕಾಸು ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಆಯೋಗದ ಸಲಹಾ ಮಂಡಳಿ ಮತ್ತು ಇತರ ಕ್ಷೇತ್ರಗಳ ತಜ್ಞರು ಮತ್ತು ಶ್ರೇಷ್ಠ ಶಿಕ್ಷಣ ಸಂಸ್ಥೆಗಳೊಂದಿಗೆ ನಡೆಸಿದ ಬಹು ಆಯಾಮದ ಸಮಾಲೋಚನೆಗಳ ನಂತರ ಆಯೋಗ ತಮ್ಮ ವರದಿ ಅಂತಿಮಗೊಳಿಸಿದೆ.