15 ದಿನಗಳಲ್ಲಿ ಗ್ರಾ.ಪಂಗಳಿಗೆ ಸೋಂಕು ಹರಡುವುದನ್ನು ತಡೆಗಟ್ಟಿ

ಹನೂರು: ಮೇ.28: ಮುಂದಿನ 15 ದಿನಗಳಲ್ಲಿ ಹುತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಿ ಕೋವಿಡ್ ಮುಕ್ತ ಗ್ರಾ.ಪಂ ಮಾಡಿಸಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ತಾಲೂಕಿನ ಹುತ್ತೂರು ಗ್ರಾಮದಲ್ಲಿ ಗ್ರಾ.ಪಂ. ಟಾಸ್ಕ್‍ಫೆÇೀರ್ಸ್ ಸಭೆ ನಡೆಸಿ ಮಾತನಾಡಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಕೋವಿಡ್ ಸೊಂಕು ಕಂಡು ಬಂದಿರುವುದು ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.ಆದುದರಿಂದ ಕೂಡಲೇ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಕೈಗೊಳ್ಳಬೇಕು. ಕೋವಿಡ್ ಸೊಂಕಿತರನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಉಳಿಯಲು ಬಿಡದೆ ಕೊವೀಡ್ ಕೇರ್ ಸೆಂಟರ್‍ಗಳಿಗೆ ರವಾನಿಸಬೇಕು ಎಂದು ತಿಳಿಸಿದರು.
ಆಕ್ಸಿಮೀಟರ್‍ರಿಪೇರಿ ಎಂದ ಆಶಾ ಕಾರ್ಯಕರ್ತೆ:
ಹೋಂ ಕ್ವಾರಂಟೈನ್‍ನಲ್ಲಿರುವವರ ಮೇಲೆ ಯಾವ ರೀತಿ ನಿಗಾವಹಿಸಲಾಗುತ್ತಿದೆ ಎಂದು ಮಾಹಿತಿ ಪಡೆಯುತ್ತಿದ್ದಾಗ ಅವರಿಗೆ ಆಮ್ಲಜನಕ ಸ್ಯಾಚುರೇಷನ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ವೇಳೆ ಆಶಾ ಕಾರ್ಯಕರ್ತೆತಮಗೆ ನಿಡಿರುವ ಆಕ್ಸಿಮೀಟರ್ ರಿಪೇರಿಯಾಗಿದೆ ಎಂದು ದೂರಿದರು. ಈ ವೇಳೆ ಶಾಸಕ ನರೇಂದ್ರ ಸರ್ಕಾರದ ವತಿಯಿಂದ ಆಕ್ಸಿಮೀಟರ್ ನೀಡಲಾಗುತ್ತಿದ್ದು ಅದನ್ನು ಪಡೆದು ಕೊಳ್ಳುವಂತೆ ಒಂದೊಮ್ಮೆ ದೊರಕದಿದ್ದಲ್ಲಿ ತಾವು ವೈಯಕ್ತಿಕವಾಗಿ ನೀಡಿರುವ 50 ಆಕ್ಸಿಮೀಟರ್‍ಗಳಲ್ಲಿ ಒಂದನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಆಂಬುಲೆನ್ಸ್ ಸೌಲಭ್ಯ ಕಲ್ಪಿಸಿ:
ಪಿ.ಜಿ.ಪಾಳ್ಯ, ಹುತ್ತೂರು, ಬೈಲೂರು ಗ್ರಾಮ ಪಂಚಾಯಿತಿಗಳು ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ತುರ್ತು ಆರೋಗ್ಯ ಸಮಸ್ಯೆಯಾದಾಗಆಂಬುಲೆನ್ಸ್ ದೊರಕುವುದು ಕಷ್ಟವಾಗುತ್ತಿದೆ ಎಂದು ಪಿ.ಜಿ.ಪಾಳ್ಯ ಗ್ರಾ.ಪಂ ಅಧ್ಯಕ್ಷ ಶಾಸಕರಿಗೆ ದೂರು ನೀಡಿದರು. ಈ ವೇಳೆ ನರೇಂದ್ರ ಮಾತನಾಡಿ ಅತಿ ಶೀಘ್ರದಲ್ಲಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈಯಕ್ತಿಕವಾಗಿ ಆಂಬುಲೆನ್ಸ್ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಾಗರಾಜು, ಪ್ರಭಾರ ಇಓ ಧರಣೇಶ್, ಸಬ್‍ಇನ್ಸ್ಪೆಕ್ಟರ್ ನಾಗೇಶ್, ಗ್ರಾ.ಪಂ ಅಧ್ಯಕ್ಷರಾದ ಸದಾನಂದಮೂರ್ತಿ, ಕೃಷ್ಣಮೂರ್ತಿ, ಪಿಡಿಓಗಳಾದ ರಾಜು, ನಂಜುಂಡಸ್ವಾಮಿ, ರಾಜಸ್ವ ನಿರೀಕ್ಷಕ ನಂಜೇಗೌಡ, ಗ್ರಾಮ ಲೆಕ್ಕಿಗ ಕಾರ್ತಿಕ್ ಇನ್ನಿತರರು ಹಾಜರಿದ್ದರು.