15 ಕೋಟಿ ರೂಗಳ ಸರ್ಕಾರಿ ನೌಕರರ ವಸತಿ ಗೃಹಕ್ಕೆ ಶಾಸಕರಿಂದ ಭೂಮಿಪೂಜೆ

ಬಳ್ಳಾರಿ ನ 17 : ನಗರದ ಸರ್ಕಾರಿ ಅತಿಥಿ ಗೃಹ ಹಿಂಭಾಗ, ಎರೆಡು ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತದ ನೂತನ ಭವನದ ಬಳಿ ಲೋಕೋಪಯೋಗಿ ಇಲಾಖೆ ರಾಜ್ಯ ಸರ್ಕಾರಿ ನೌಕರರಿಗೆ 15 ಕೋಟಿ ರೂ ವೆಚ್ಚದಿಂದ 50 ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತಿದ್ದು ಈ ಕಾಮಗಾರಿಗೆ ನಿನ್ನೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಗರದಲ್ಲಿ ಆರು ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದಾರೆ. ಆದರೆ ಇಲ್ಲಿನ ಕೋಟೆ ಆವರಣದಲ್ಲಿ 22, ಕೌಲ್ ಬಜಾರ್‍ನಲ್ಲಿ 28 ಮಾತ್ರ ಸಧ್ಯ ಸರ್ಕಾರಿ ನೌಕರರ ವಸತಿ ಗೃಹಗಳಿವೆ. ಈ ಮೊದಲು ಪಾರ್ವತಿ ನಗರದಲ್ಲಿದ್ದ 108 ವಸತಿ ಗೃಹಗಳನ್ನು ನ್ಯಾಯಾಂಗ ಇಲಾಖೆ ನೌಕರರು ಪಡೆದಿರುವುದರಿಂದ ಇತರೆ ಇಲಾಖೆ ನೌಕರರಿಗೆ ತೀವ್ರ ಸಮಸ್ಯೆ ಆಗಿದೆ. ಅದಕ್ಕಾಗಿ ಈಗ ವಿವಿಧ ಕ್ಯಾಡರ್‍ಗಳಿಗೆ ಸಂಬಂಧಿಸಿ ನಾಲ್ಕು ಸ್ವರೂಪದಲ್ಲಿ 50 ವಸತಿ ಗೃಹಗಳನ್ನು ನಿರ್ಮಿಸುತ್ತಿದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಶಿವಾಜಿರಾವ್ ಮತ್ತು ಗೌರವ ಅಧ್ಯಕ್ಷ ಡಾ.ಎಂಟಿ.ಮಲ್ಲೇಶ್ ಅವರು ನಗರದಲ್ಲಿ ಕನಿಷ್ಠ ಒಂದು ಸಾವಿರ ವಸತಿ ಗೃಹಗಳು ಸರ್ಕಾರಿ ನೌಕರರಿಗೆ ಬೇಕು ಅದಕ್ಕಾಗಿ ಆಲದಹಳ್ಳಿ ಬಳಿ 60 ಎಕರೆ ಸರ್ಕಾರಿ ಜಮೀನು ಇದ್ದು. ಅದರಲ್ಲಿ 20 ಎಕರೆಯನ್ನು ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣಕ್ಕೆ ಮಿಸಲಿರಿಸುವಂತೆ ಕ್ರಮ ಕೈಗೊಳ್ಳಲು ಶಾಸಕರಿಗೆ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಕೆ.ರಾಮಕೃಷ್ಣ, ಖಜಾಂಚಿ ಭದ್ರಯ್ಯ, ಉಪಾಧ್ಯಕ್ಷರಾದ ಆಸಿಫ್, ಹನುಮಂತರಾಯ, ಮಂಜುನಾಥ್, ನಾಗರಾಜ್, ಮುಖಂಡರುಗಳಾದ ವೀರಶೇಖರ ರೆಡ್ಡಿ, ಕೆ.ಎಸ್.ಅಶೋಕ್ ಕುಮಾರ್, ಮೋತ್ಕರ್ ಶ್ರೀನಿವಾಸ್, ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ನಾಗದೇವ್, ಕಿರಿಯ ಇಂಜಿನೀಯರ್ ಸುರೇಶ್ ಮೊದಲಾದವರು ಇದ್ದರು.