15 ಎಕರೆ ಭೂ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ನಗರ ನಾಮಕರಣ

ತಾಳಿಕೋಟೆ:ಜ.4: ಪಟ್ಟಣದಲ್ಲಿ 15 ಎಕರೆ ಭೂ ಪ್ರದೇಶದಲ್ಲಿ ನಿರ್ಮಾಣಗೊಂಡ ಲೇಓಟ್‍ಗೆ ಶ್ರೀ ಸಿದ್ದೇಶ್ವರ ನಗರ ಎಂದು ನಾಮಕರಣ ಮಾಡುವ ಮೂಲಕ ಉದ್ಯಮಿ ಸಮಾಜ ಸೇವಕ ಬಸನಗೌಡ ಕುಪ್ಪಿ ಅವರು ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಮಂಗಳವಾರರಂದು ಗಡಿಸೋಮನಾಳ ರಸ್ತೆಯ ಹುಡ್ಕೋ ಬಡಾವಣೆಯ ಎದುರು 15 ಎಕರೆ ಪ್ರದೇಶಗಳಲ್ಲಿ ಲೇಓಟ್‍ಗಳನ್ನಾಗಿ ಪರಿವರ್ತಿಸುತ್ತಿರುವ ಇಡೀ ಕ್ಷೇತ್ರಕ್ಕೆ ಶ್ರೀ ಸಿದ್ದೇಶ್ವರ ನಗರವೆಂದು ನಾಮಕರಣ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಉದ್ಯಮಿ ಸಮಾಜ ಸೇವಕ ಬಸನಗೌಡ ಕುಪ್ಪಿ ಅವರು ನಾನು ಸಿದ್ದೇಶ್ವರ ಶ್ರೀಗಳ ಪ್ರವಚನದಿಂದ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದೇನೆ ಅಲ್ಲದೇ ನಾನು ಸಮಾಜದಲ್ಲಿ ಬೆಳೆಯಲು ಅವರ ಪ್ರವಚನದ ಸಾರವೇ ಕಾರಣವಾಗಿದೆ ಹೀಗಾಗಿ ಅವರ ನೆನಪಿಗಾಗಿ ನಾನು ಸಿದ್ದಪಡಿಸಿರುವ 15 ಎಕರೆ ಭೂ ಪ್ರದೇಶದ ಲೇಔಟ್‍ಗೆ ಶ್ರೀ ಸಿದ್ದೇಶ್ವರ ನಗರವೆಂದು ನಾಮಕರಣ ಮಾಡಿ ಅವರಿಗೆ ನನ್ನ ಭಕ್ತಿಯನ್ನು ಸಮರ್ಪಿಸಿದ್ದೇನೆಂದರು.

ಇದೇ ಸಮಯದಲ್ಲಿ ಶಾಸ್ತ್ರೀಗಳಿಂದ ಶಾಸ್ತ್ರೋಕ್ತವಾಗಿ 15 ಎಕರೆ ಭೂ ಪ್ರದೇಶದ ಲೇಔಟ್‍ದಲ್ಲಿ ಪೂಜೆ ಪುನಸ್ಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸಿದ್ದೇಶ್ವರ ನಗರವೆಂದ ನಾಮಕರಣ ಮಾಡಿ ಫಲಕವನ್ನು ಅಳವಡಿಸಲಾಯಿತು.

ಈ ಸಮಯದಲ್ಲಿ ಮುಖಂಡರುಗಳಾದ ವಾಸುದೇವ ಹೆಬಸೂರ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ, ಆರ್.ಬಿ.ದಮ್ಮೂರಮಠ, ರಾಜು ಹಂಚಾಟೆ, ರಾಜಣ್ಣ ಸೊಂಡೂರ, ಶ್ರೀಕಾಂತ ಪತ್ತಾರ, ಜೈಸಿಂಗ್ ಮೂಲಿಮನಿ, ಜಿ.ಎ.ಕಸ್ತೂರಿ, ದೇಸಾಯಿ, ಅಗರವಾಲಾ, ಸರಶೆಟ್ಟಿ, ಒಳಗೊಂಡು ಅನೇಕರು ಇದ್ದರು.