15ನೇ ಹಣಕಾಸು ವರದಿ ರಾಷ್ಟ್ರಪತಿಗಳಿಗೆ ಸಲ್ಲಿಕೆ

ನವದೆಹಲಿ, ನ. 9- 2021ರಿಂದ 26 ರ ವರೆಗಿನ‌ 15ನೇ ಹಣಕಾಸು ಆಯೋಗ ತನ್ನ ವರದಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಡ್ ಅವರಿಗೆ ಇಂದು ಸಲ್ಲಿಸಿತು.

ಆಯೋಗ ಅಧ್ಯಕ್ಷ ಎನ್.ಕೆ ಸಿಂಗ್ ,ಸದಸ್ಯರಾದ ಅಜಯ್ ನಾರಾಯಣ್ ‌ಝಾ, ಪ್ರೊ,ಅನೂಪ್ ಸಿಂಗ್,ಪ್ರೊ.ಅಶೋಕ್ ಲಹರಿ,ಡಾ. ರಮೇಶ್ ಚಂದ್ ಹಾಗು ಕಾರ್ಯದರ್ಶಿ ಅರವಿಂದ್ ‌ಮೆಹ್ತಾ ಅವರು ವರದಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಸರ್ಕಾರಗಳು, ಹಿಂದಿನ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಆಯೋಗದ ಸಲಹಾ ಮಂಡಳಿ ಮತ್ತು ಇತರ ಕ್ಷೇತ್ರಗಳ ತಜ್ಞರು, ತಜ್ಞ ಶಿಕ್ಷಣ ಸಂಸ್ಥೆಗಳು ಮತ್ತು ಬಹು ಪಕ್ಷೀಯ ಸಂಸ್ಥೆಗಳೊಂದಿಗೆ ನಡೆಸಿದ ಸುದೀರ್ಘ ಸಮಾಲೋಚನೆಯ ಬಳಿಕ, ಈ ವರದಿ ಆಖೈರುಗೊಳಿಸಲಾಗಿದೆ.

ಶೀಘ್ರ ಪ್ರಧಾನಿಗೆ ಸಲ್ಲಿಕೆ:

ಹಣಕಾಸು ಆಯೋಗ, ತನ್ನ ಈ ವರದಿಯ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಲ್ಲಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಆ ಬಳಿಕ ಕೇಂದ್ರ ಹಣಕಾಸು ಸಚಿವರು , ವರದಿ ಮತ್ತು ಸರ್ಕಾರ ಕೈಗೊಂಡ ಕ್ರಮದ ವರದಿಯ ಸಹಿತ ಸಂಸತ್ತಿನಲ್ಲಿ ಮಂಡನೆಯಾಗಲಿದೆ.