15ನೇ ವರ್ಷಾಚರಣೆಯಲ್ಲಿ ಕೃಷಿ ಸಮುದಾಯ ಬಾನುಲಿ


ಧಾರವಾಡ,ಮೇ.18:ಕೃಷಿ ಸಮುದಾಯ ಬಾನುಲಿ ತನ್ನ ಕಾರ್ಯವ್ಯಾಪ್ತಿಯಲ್ಲಿ ರೈತರ ಮನೆ ಮಾತಾಗಿ. ರೈತರ ಅಭಿವೃದ್ಧಿಗಾಗಿ ಶ್ರಮಿಸುವ ಈ ಕೇಂದ್ರಕ್ಕೆ 15ನೇ ವರ್ಷಾಚರಣೆ ಈ ವರ್ಷಾಚರಣೆಗೆ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕುಲಪತಿಗಳಾದ ಡಾ|| ಎಂ.ಬಿ. ಛಟ್ಟಿ ಅವರು ಕೋವಿಡ್-19ರ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೇಕ್ ಕಟಮಾಡುವುದರೊಂದಿಗೆ ಈ ಸಮುದಾಯ ಬಾನುಲಿ ಇನ್ನು ಹೆಚ್ಚು ಹೆಚ್ಚು ರೈತರಿಗೆ ಉಪಯೊಗವಾಲಿ, ಮುಂಬರುವ ದಿನಗಳಲ್ಲಿ ಬಾನುಲಿ ಕಾರ್ಯಕ್ರಮಗಳು ರೈತರಿಗಾಗಿ, ರೈತ ಮಹಿಳೆಯರಿಗಾಗಿ, ಯುವಕ ಯುವತಿಯರಿಗಾಗಿ, ವಿಸ್ತರಣಾ ಕಾರ್ಯಕರ್ತರಿಗೆ ಹೆಚ್ಚು ಹೆಚ್ಚು ಕೃಷಿ ಮಾಹಿತಿಗಳು ತಲುಪಲಿ ಎಂದರು.
ಕೃಷಿ ಸಮುದಾಯ ಬಾನುಲಿಕೇಂದ್ರದ ಮುಖಸ್ಥ ಡಾ|| ದೇವೆಂದ್ರಪ್ಪ. ಎಸ್. ಇವರು ಕೃಷಿ ಸಮುದಾಯ ರೈತರೊಡನೆ ನಡೆದು ಬಂದ ದಾರಿ, ಸಮುದಾಯ ಬಾನುಲಿಕೇಂದ್ರದ ಯೋಜನೆಗಳ ಅನುಷ್ಠಾನದ ಬಗ್ಗೆ ಹಾಗೂ ವೈದ್ಯರುಗಳಿಂದ ಮಾಹಿತಿಯನ್ನು ಜನರಿಗೆ ತಲುಪುವಂತೆ ಮಾಡಿದೆ ಹಾಗೂ ಕೋವಿಡ್-19ರ ಬಗ್ಗೆ ಬೇರೆ ಬೇರೆ ಡಾಕ್ಟರಗಳಿಂದ ಮಾಹಿತಿಯನ್ನು ಬಿತ್ತರಿಸಲಾಗಿದೆ, ವಿಶ್ವವಿದ್ಯಾಲಯ ಅಧಿಕಾರಿ ವರ್ಗದವರಿಂದ, ತಜ್ಞರಿಂದ ಕೋರೊನಾದ ಬಗ್ಗೆ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದರು.
ಕೃಷಿ ಸಮುದಾಯ ಬಾನುಲಿಕೇಂದ್ರದ ಉದ್ಘೋಶಕರು ನಿರ್ಮಲಾ ಹನುಮಂತ, ಕ್ಷೇತ್ರ ವರದಿಗಾರರು ಬಸವರಾಜ ಹಿತ್ತಲಮನಿ, ಕುಮಾರಿ ಅಪ್ರಿನ್ ಬಾನು ತಡಪತ್ತಿ ತಾಂತ್ರೀಕ ಸಂಪಾದಕರು ಜಗದೀಶ ಮಡಿವಾಳ ಟ್ರಾನ್ಸಮಿಶನ ಮೇಲ್ವಿಚಾರಕರು ಇವರು ಕೂಡ ಕಾರ್ಯಕ್ರಮಗಳನ್ನು ರೂಪಿಸಿ, ದ್ವನಿ ಮುದ್ರಿಸಿ ಈ 15 ವರ್ಷದಲ್ಲಿ 35000 ತಾಸುಗಳವರೆಗೆ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಶ್ರಮಿಸಿದ್ದಾರೆ.