15ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಏ.೨೪- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ೧೫ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆ ಹೊರ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಬರಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಅನುಗುಣವಾಗಿ ವಿಮಾನಗಳ ಹಾರಾಟ ನಡೆಸಲಿದ್ದು,ವಾರಾಂತ್ಯದ ಕರ್ಪ್ಯೂನಿಂದ ಕೊನೆ ಕ್ಷಣದಲ್ಲಿ ವಿಮಾನವನ್ನು ರದ್ದು ಮಾಡಲಾಗಿದೆ.
ವಿಮಾನಕ್ಕೆ ರಾತ್ರಿಯಿಂದ ವೇಟಿಂಗ್ ಇಂದು ಬೆಳಗ್ಗೆ ಸಿಗಲ್ಲವೆಂದು ತಿಳಿದು ನಿನ್ನೆ ರಾತ್ರಿಯಿಂದ ಪ್ರಯಾಣಿಕರು ವಿಮಾನಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಂದ ಪ್ರಯಾಣಿಕರು ಕುಳಿತ್ತಿದ್ದ ಕುರ್ಚಿಯ ಮೇಲೆ ನಿದ್ದೆಗೆ ಜಾರಿದ್ದು ಕಂಡುಬಂದಿದೆ.