14300 ಕೋಟಿ ವೆಚ್ಚದಲ್ಲಿ 3 ಔಷದ, ಉಪಕರಣ ಪಾರ್ಕ್ ನಿರ್ಮಾಣ: ಡಿವಿಎಸ್

ನವದೆಹಲಿ,ಡಿ.1-ದೇಶದಲ್ಲಿ 14300 ಕೋಟಿ ರೂ ವೆಚ್ಚದಲ್ಲಿ ಮೂರು ಕಡೆ ಬಲ್ಕ್‌ ಡ್ರಗ್‌ ಪಾರ್ಕ್‌ ಹಾಗೂ ನಾಲ್ಕು ಮೆಡಿಕಲ್‌ ಡಿವೈಸ್‌ ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

ಭಾರತ ಜಗತ್ತಿನ ಪ್ರಮುಖ ಔಷಧ ರಫ್ತುದಾರ ರಾಷ್ಟ್ರ. ಆದರೆ ನಾವಿನ್ನೂ ಕೆಲವು ಮೂಲ ಔಷಧ ರಾಸಾಯನಿಕಗಳಿಗಾಗಿ ಚೀನಾ ಮುಂತಾದ ದೇಶಗಳ ಮೇಲೆಯೇ ಅವಲಂಬಿಸಿದ್ದೇವೆ. ಇವನ್ನು ಕೂಡಾ ಸಂಪೂರ್ಣ ಸ್ವದೇಶಿಯವಾಗಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ರಸಗೊಬ್ಬರ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿ ಮಾಡಲು ನಿರ್ಧಿಷ್ಟ ಯೋಜನೆಗಳನ್ನು ರೂಪಿಸಿದೆ. 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಯುರಿಯಾ ಉತ್ಪಾದನಾ ಘಟಕಗಳನ್ನು ಪುನುರುಜ್ಜೀವನಗೊಳಿಸಲಾಗುತ್ತಿದೆ. ಇವು ವಾರ್ಷಿಕವಾಗಿ ತಲಾ 12 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯ ಘಟಕಗಳು. ರಾಮಗುಂಡಂ ಕಾರ್ಖಾನೆಯ ಕೆಲಸ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ” ಎಂದರು.

ಕೊರೊನಾದಿಂದ ಹೊಸಪಾಠಗಳನ್ನು ಕಲಿಯುತ್ತಿದ್ದೇವೆ. ಲಸಿಕೆ ದೊರೆಯುತ್ತಿದ್ದಂತೆ ಸರ್ಕಾರ ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಕೊರೊನಾ ವೈರಾಣು ಇನ್ನೂ ವ್ಯಾಪಕವಾಗಿಯೇ ಇದೆ. ಹಾಗಾಗಿ ನಾವೆಲ್ಲ ಅದರ ಬಗ್ಗೆ ಮುಂಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದ್ದಾರೆ
ಮಾಸ್ಕ್‌ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಇವೇ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು. 2021ರಲ್ಲಿ ಕೊರೊನಾ ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲ ಪಣತೊಡೋಣ ಎಂದು ಹೇಳಿದ್ದಾರೆ

ಸಮರ್ಥ ನಿರ್ವಹಣೆ:

ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ದೇಶದಲ್ಲಿ ಕೊರೋನೊ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಕೊರೋನಾ ಸವಾಲನ್ನು ಒಂದು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನವಾಗಿ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಎಂದರು.
೨೦೨೧ರಲ್ಲಿ ಸಾಂಕ್ರಾಮಿಕ ಕೋರೊನಾ ರೋಗದ ಸಂಪೂರ್ಣ ನಿರ್ಮೂಲನೆಗೆ ನಾವೆಲ್ಲ ಸೇರಿ ದೃಢ ಸಂಕಲ್ಪ ಮಾಡೋಣ ಎಂದು ಹೇಳಿರುವ ಅವರು‌
ದೇಶದಲ್ಲಿ ಸಾಂಕ್ರಾಮಿಕ ರೋಗ ಭಾರೀ ಪ್ರಮಾಣದಲ್ಲಿ ಸಾವು-ನೋವು ಉಂಟುಮಾಡಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ