14, 15ರಂದು ಶ್ರೀಮದ್ ಭಗವದ್ಗೀತಾ ಅಭಿಯಾನ

ಸತ್ತೂರು: 12: ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಹಾಗೂ ಆಜ್ಞೆಯಿಂದ, ಭಾರತಾದಾದ್ಯಂತ ಹಮ್ಮಿಕೊಂಡಿರುವ , ಶ್ರೀಮದ್ ಭಗವದ್ಗೀತಾ 12ನೇ ಅಧ್ಯಾಯದ ಅಭಿಯಾನ ಕಾರ್ಯಕ್ರಮವನ್ನು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ ಡಾ. ಶ್ರೀನಾಥ್ ಇವರ ನಿವಾಸದಲ್ಲಿ ದಿನಾಂಕ 14 ಮತ್ತು 15ರಂದು ಜರುಗಲಿದೆ. ವಿಶೇಷ ಉಪನ್ಯಾಸಕರಾಗಿ ಪಂ. ಕಪಿಲಾಚಾರ್ಯ ಗಲಗಲಿ ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಹರಿವಾಯು ಗುರುಗಳ ಪಾರಾಯಣದಿಗಳು ನಡೆಯಲಿವೆ. ಸಕಲ ಸದ್ಭಕ್ತರು ಆಗಮಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ 63 61 83 57 10 ಸಂಪರ್ಕಿಸಲು ಬಳಗದ ಕಾರ್ಯದರ್ಶಿ, ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.