14 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಬಾದಾಮಿ,ಏ21: ಪ್ರಮುಖವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಯೋಜನೆ ರೂಪಿಸಿ ಮುಂಗಡ 14ಲಕ್ಷ ರೂ ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಹೊಸಮನಿ ಹೇಳಿದರು.
ನಗರದ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ 2021-22ನೇ ಸಾಲಿನ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು ನಗರವನ್ನು ಅಧುನಿಕ ರೀತಿಯಲ್ಲಿ ಅಭೀವೃದ್ಧಿಪಡಿಸಲು ಎಸ್.ಎಪ್.ಸಿ ವಿಶೇಷ ಅನುದಾನ 15ನೇ ಹಣಕಾಸು ಮತ್ತು ಪರಸಭ ಅನುದಾನಗಳಲ್ಲಿ ರಸ್ತೆ, ತ್ಯಾಜ್ಯ, ನೀರು ಸಂಸ್ಕರಣೆ, ಕುಡಿಯುವ ನೀರು ಘನತ್ಯಾಜ್ಯ ವಸ್ತು ನಿರ್ವಹಣೆ ಕಲ್ಲು ಹಾಸು ಪಾದಚಾರಿ ಮಾರ್ಗಗಳು ಚರಂಡಿ ಸೇರಿದಂತೆ ಇತರೆ ಸ್ಥಿರಾಸ್ತಿಗಳ ನಿರ್ಮಾಣಕ್ಕಾಗಿ 360ಲಕ್ಷ ರೂ ಗಳನ್ನು ಮೀಸಲಿರಿಸಿದೆ. ಎಂದರು.
ನೆನಗುದಿಗೆ ಬಿದ್ದಿದ್ದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಕನಸು ನನಸಾಗಿಸಲು 2015-16ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನ ಮೊತ್ತದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 100ಲಕ್ಷ ರೂ, ಕುಡಿಯುವ ನೀರು ಮತ್ತು ವಿತರಣಾ ದುರಸ್ತಿಗೆ 40ಲಕ್ಷ ರೂ,
ಪ್ರತಿನಿತ್ಯ ನಗರದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ವಂತ ಸೂರು ಕಲ್ಪಿಸಲು ಪಿಕೆಜಿಬಿ ಯೋಜನೆಯಡಿ 4ಮನೆಗಳನ್ನು ನಿರ್ಮಿಸಲು ಕಾಯ್ದಿರಿಸಿದ ಮೊತ್ತ 30ಲಕ್ಷ ರೂ, ನಗರದ ಸೌಂದರ್ಯ ಮತ್ತು ಹಸಿರು ವಾತಾವರಣ ಕಲ್ಪಿಸಲು ಗಿಡಗಳನ್ನು ನೆಡಲು 3ಲಕ್ಷ, ಉದ್ಯಾನವನದಲ್ಲಿ ಪಾದಚಾರಿ ಮಾರ್ಗ ಲಘು ವ್ಯಾಯಾಮ ಸಾಧನಗಳನ್ನ ಮತ್ತು ಮಕ್ಕಳ ಆಟಿಕೆ ಅಳವಡಿಸಿ ಅಭಿವೃದ್ಧಿಪಡಿಸಲು 15ಲಕ್ಷ ರೂ, ಸ್ಮಶಾನಗಳಲ್ಲಿ ನೀರಿನ ವ್ಯವಸ್ಥೆಗೆ 10ಲಕ್ಷ ರೂ, ಮ್ಯೂಜಿಯಂ ರಸ್ತೆ ಅಭಿವೃದ್ಧಿಗಾಗಿ 40ಲಕ್ಷ ರೂ, ಹೈಮಾಸ್ಕ್ ಅಳವಡಿಸಲು 15ಲಕ್ಷ ರೂ, ನಗರದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ಮತ್ತು ಮೂತ್ರಾಲಯ ನಿರ್ಮಾಣಕ್ಕಾಗಿ 12ಲಕ್ಷ ರೂ, ಸೇರಿದಂತೆ ಒಟ್ಟು 1166ಲಕ್ಷ ರೂ. ನಿರೀಕ್ಷಿಸಿದ್ದು 1152ಲಕ್ಷ ರೂ ಅಭಿವೃದ್ಧಿಗೆ ಕಾರ್ಯಗಳಿಗೆ ಉಪಯೋಗಸಿಕೊಳ್ಳು ನಿರೀಕ್ಷಿಸಿದ್ದು ಅಚಿತಿಮವಾಗಿ 14ಲಕ್ಷ ರೂ ಲಕ್ಷದ ಉಳಿತಾಯ ಮಂಡನಗೆ ಸರ್ವ ಸದಸ್ಯರ ಸಮ್ಮುಖದಲ್ಲಿ ಅನುಮೋದನೆ ನೀಡಲಾಯಿತು. ಎಂದು ಅಧ್ಯಕ್ಷ ಮಂಜುನಾಥ ಹೊಸಮನಿ ಹೇಳಿದರು.
ನಂತರ ಸದಸ್ಯರ ಪಾಂಡು ಕಟ್ಟಿಮನಿ ಮಾತನಾಡಿ ನಗರದಲ್ಲಿ 32 ಐ.ಡಿ.ಎಸ್.ಎಂ.ಟಿ ಮಳಿಗೆಗಳು ನಿರ್ಮಾಣವಾಗಿ ಕಳೆದ 3ವರ್ಷ ವಾದರೂ ಉದ್ಘಾಟನೆಯಾಗಿಲ್ಲ ಅಂದಾಜು ತಿಂಗಳಿಗೆ 5ಸಾವಿರ ದಂತೆ ಆದರೆ ಪುರಸಭೆಗೆ 3ವರ್ಷಕ್ಕೆ 45 ಲಕ್ಷ ನಷ್ಟ ಆಯಿತು ಪುರಸಭೆಗೆ ಬರುವ ಆದಾಯಕ್ಕೆ ಹೊಡೆತ ಬಿದ್ದಿದೆ ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.
ನಗರದಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ನಿಜವಾದ ಬಾಡಿಗೆ ಪಡೆದದವರು ಇಲ್ಲ ಬೇರೆ ಬೇರೆಯವರು ಹೆಚ್ಚಿನ ಬಾಡಿಗೆಗೆ ಪಡೆದು ಇದ್ದಾರೆ ಅಂತವರನ್ನು ಪರಿಶೀಲನೆ ಮಾಡಿ ಈಗ ಇದ್ದವರ ಹೆಸರಿನಲ್ಲಿ ಮಳಿಗೆ ಕೊಡಿ, ಎಂದು ಆಗ್ರಹಿಸಿದರು.
ಶಾಸಕರ ವಿಶೇಷ ಅನುದಾನದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡುಗಳಿಗೆ ಅನುದಾನ ಹಂಚಿಕೆ ಮಾಡಿ ತಾರತಮ್ಯ ಮಾಡಬೇಡಿ ಎಂದು ಸದಸ್ಯ ನಾಗರಾಜ ಕಾಚಟ್ಟಿ, ಮತ್ತು ರೆಹಮಾನ ಕೆಕಲಮಟ್ಟಿ ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ, ಜ್ಯೋತಿ ಗಿರೀಶ, ಸದಸ್ಯರಾದ ರಾಜಮಹಮ್ಮದ ಬಾಗವಾನ, ಬಸವರಾಜ ತೀರ್ಥಪ್ಪನವರ, ಫಾರೂಕಹಮ್ಮದ ದೊಡಮನಿ, ಮಕ್ತುಮ ತಾಂಬೂಳಿ, ಅಶೋಕ ಯಲಿಗಾರ, ಶಂಕರ ಕನಕಗಿರಿ, ಪರಶುರಾಮ ರೋಣದ, ಬಸವರಾಜ ಗೊರಕೊಪ್ಪ, ಮಹಾಂತೇಶ ತಳವಾರ, ಸೇರಿದಂತೆ ಮಹಿಳಾ ಸದಸ್ಯರು ಪುರಸಭೆ ಸಿಬ್ಬಂದಿ ಇದ್ದರು.