
ಕಲಬುರಗಿ.ಏ.10: ಜೈ ಭಾರತ ಮಾತಾ ಸೆವಾ ಸಮಿತಿ (ರಿ) ನವದೆಹಲಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ನೇತ್ರತ್ವದಲ್ಲಿ ಏ.14 ರಂದು ಮುಂಬೈನ ವಿರಾರದ ಶಿವ ಮಂದಿರ ಹವಾ ಮಲ್ಲಿನಾಥ ಮಹಾರಾಜರ ಆಶ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಮುಂಬೈನ ದಾದರದಲ್ಲಿನ ಚೈತ್ಯ ಭೂಮಿಯಲ್ಲಿನ ಡಾ. ಬಿ ಆರ್. ಅಂಬೇಡ್ಕರ್ ಅವರ ಸ್ಮಾರಕಕ್ಕೆ ಸಮಿತಿ ವತಿಯಿಂದ ಪುಷ್ಪ ನಮನ ಸಲ್ಲಿಸಲಾಗುವುದು, ತದನಂತರ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಶ್ರೀ ಶಿವ ಮಂದಿರ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಆಶ್ರಮ ಮುಂಬೈನಲ್ಲಿ ಸಮಸ್ತ ದೇಶಬಾಂಧವರ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಜಯಂತ್ಯೋತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಲಿರುವ ಖ್ಯಾತ ಉಪನ್ಯಾಸಕರು ಡಾ.ಬಿ.ಆರ್. ಅಂಬೇಡ್ಕರ ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿಮಹಾರಾಷ್ಟ್ರ, ಗುಜರಾತ್, ರಾಜಸ್ತಾನಾ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ದೇಶ ಬಾಂಧವರು ಭಾಗವಹಿಸಲಿದ್ದಾರೆ.
ಸಮಿತಿ ವತಿಯಿಂದ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನ ಹಾಗೂ ಸಲಹೆ ಅನುಸಾರವಾಗಿ ಕಾರ್ಯ ಕ್ರಮದಲ್ಲಿ ಭಾಗವಹಿಸುವ ದೇಶ ಬಾಂಧವರಿಗೆ ಅಚ್ಚುಕಟ್ಟಾದ ಊಟ, ವಸತಿ ಸೇರಿದಂತೆ ಕಾರ್ಯಾ ಕ್ರಮದ ಯಶಸ್ವಿಗೆ ಬೇಕಾಗುವ ಎಲ್ಲಾ ತರಹದ ತಯಾರು ಮಾಡಿಕೊಳ್ಳಲಾಗಿದ್ದು ದೇಶ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶ ಭಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ ತಿಳಿಸಿದ್ದಾರೆ.
12ರಂದು ದೇಶಭಕ್ತಿ ಯಾತ್ರೆ: ಮುಂಬೈ ದಲ್ಲಿ ನಡೆಯಲಿರುವ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೆಚ್ಚಿನ ದೇಶಭಕ್ತರು ಪಾಲ್ಗೊಳ್ಳುವಂತಾಗಲು ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ನೇತೃತ್ವದಲ್ಲಿ ಎಪ್ರಿಲ 12ರಂದು ಬೆಳಿಗ್ಗೆ 11ಕ್ಕೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಹತ್ತಿರದ ಭಾರತ ಮಾತಾ ಮಂದಿರದಿಂದ ದೇಶಭಕ್ತಿ ಯಾತ್ರೆ ಹೊರಡಲಿದೆ.
ಸಹಸ್ರಾರು ದೇಶ ಬಾಂಧವರು ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳುವಂತಾಗಲು ದೇಶಭಕ್ತಿ ಯಾತ್ರೆ ಹೊರಡಲಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.