14 ದಿನಗಳ ಕಾಲ ಜಗಳೂರು ಪಟ್ಟಣ ಸಂಪೂರ್ಣ ನಿಶಬ್ದ

ಜಗಳೂರು.ಏ.೨೮; ಕೊರೋನಾ ಮಹಾಮಾರಿ ವೈರಸ್  ಎರಡನೆಯ ಅಲೆ ಭಾರತದಾದ್ಯಂತ ಹೆಚ್ಚಾಗುತ್ತಿದ್ದು ಜನರಲ್ಲಿ ಭಯ ಮೂಡಿಸುತ್ತಿದೆ ರಾಜ್ಯದಲ್ಲಿಯೂ ಕರೋನ ಮರಣ ಮೃದಂಗ ಬಾರಿಸುತ್ತಿದ್ದೆ ಈ ಕೋರೋನ ಭೀತಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.ಈ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ರೋಗ ತಡೆಗಟ್ಟಲು ಪರಿಷ್ಕೃತ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿ ಹದಿನಾಲ್ಕು ದಿನಗಳ ಕಾಲ ಲಾಕ್ಡೌನ್ ಗೆ ಆದೇಶ ನೀಡಿದೆ.ರೋಗ ತಡೆಗಟ್ಟಲು ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯ ಆರೋಗ್ಯ ಇಲಾಖೆ ಕಾಲಕಾಲಕ್ಕೆ ಹೊರಡಿಸಿರುವ ಆದೇಶದಂತೆ  ಜಗಳೂರು ಪಟ್ಟಣದಲ್ಲಿ ಒಂದಲ್ಲ ಒಂದು ರೀತಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ತಾಲೂಕು ಪಂಚಾಯಿತಿ ಆರೋಗ್ಯಇಲಾಖೆ ಈ ಮಹಾಮಾರಿ ಕೋರೋನ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ 
ಮಾಸ್ಕ್ ಧರಿಸಿದವರಿಗೆ ದಂಡ -:
ಪೊಲೀಸರು ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಹೋಗುತ್ತಿರುವವರಿಗೆ ಮಾಸ್ಕ ಹಾಕಿಕೊಳ್ಳುವಂತೆಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ  ಪೊಲೀಸ್ ಇಲಾಖೆಯ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ಮತ್ತು ಆರಕ್ಷಕ ಉಪ ನಿರೀಕ್ಷಕ ಸಂತೋಷ್ ಬಾಗೋಜಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ರಾಜು ಡಿ ಬಣಕರ್  ದಿನನಿತ್ಯ ರಸ್ತೆಗಿಳಿದು ಸಾರ್ವಜನಿಕರಿಗೆ ವಾಹನದ ಮೈಕಿನಲ್ಲಿ ತಾಕೀತು ಮಾಡುತ್ತಿದ್ದಾರೆ.ಮುಖಕ್ಕೆ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.ಜೊತೆಗೆ ಸಂತೆಯಲ್ಲಿ ಇರುವ ಜನರಿಗೆ ವ್ಯಾಪಾರಸ್ಥರಿಗೆ ಹಾಗೂ ಜಗಳೂರು ಪಟ್ಟಣದ ಪ್ರತಿ  ವಾರ್ಡಿನ ಜನತೆಗೆ ಮುಖಕ್ಕೆ ಮಾಸ್ಕ ಧರಿಸುವಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಮ್ಮ ಪೊಲೀಸ್ ಇಲಾಖೆ ವಾಹನಗಳ ಮೂಲಕ  ಮನವಿ ಮಾಡುತ್ತಿದ್ದಾರೆಕೊರೋನಾ ಚೈನ್ ಲಿಂಕ್ ತಪ್ಪಿಸುವ ಏಕೈಕ ಕಾರಣಕ್ಕಾಗಿ ಜಾರಿ ಮಾಡಿರುವ ಲಾಕ್ಡೌನ್ ಗೆ ಜಗಳೂರು ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಇಂದು 6:00 ಯಿಂದ 10:00 ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು  ಜನರು ಬೆಳ್ಳಂಬೆಳಿಗ್ಗೆ ಖರೀದಿಗೆ ಮುಗಿ ಬಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು ಉಳಿದಂತೆ ಮೆಡಿಕಲ್ ಶಾಪು ಗಳಿಗೆ ಮಾತ್ರ ದಿನವಿಡಿ ತೆರೆಯಲು ಅವಕಾಶ ನೀಡಲಾಗಿತ್ತು  ಪಟ್ಟಣದ ರಸ್ತೆಗಳೆಲ್ಲಾ ಬಿಕೋ ಅನ್ನುತ್ತಿತ್ತು  ಮಹಾತ್ಮ ಗಾಂಧೀಜಿ ವೃತ್ತ ಡಾ. ಬಿ.ಆರ್ ಅಂಬೇಡ್ಕರ್ ಹಳೆ ಮಹಾತ್ಮಗಾಂಧೀಜಿ ಬಸ್ ನಿಲ್ದಾಣ. ರಾಮಾಲಯ ರಸ್ತೆ  ರಾಜೇಂದ್ರ ಪ್ರಸಾದ್ ರಸ್ತೆ ಮರೆನಹಳ್ಳಿ ರಸ್ತೆ ಭುವನೇಶ್ವರಿ ವೃತ್ತ ಚಳ್ಳಕೆರೆ ಟೋಲ್ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಕಡೆ ನೀರವ ಮೌನ ಆವರಿಸಿತ್ತು 
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪೊಲೀಸರು ಅನವಶ್ಯಕವಾಗಿ ಬೀದಿಗಿಳಿದು ಓಡಾಡುವ ಸಾರ್ವಜನಿಕರನ್ನು ಮತ್ತು ದ್ವಿಚಕ್ರ ವಾಹನ ಸವಾರರನ್ನು ನಿಯಂತ್ರಿಸಿದರು 
ಬಾಕ್ಸ್
” ಸಾರ್ವಜನಿಕರಿಗೆ ಕೋರೋನ ಬಗ್ಗೆ ಜಾಗೃತಿಯನ್ನು ನಮ್ಮ  ತಾಲೂಕಾಡಳಿತ ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಮಾಡುತ್ತಿದೆ ಹಿಂದಿನಿಂದ 14 ದಿನಗಳ ಹೊರಗೆ ಲಾಕ್ಡೌನ್ ಜಾರಿಯಲ್ಲಿದೆ ಸಾಮಾಜಿಕ ಅಂತರ ಮಾಸ್ಕ್  ಧರಿಸುವುದು ಕಡ್ಡಾಯವಾಗಿದೆ ಎಂದಿನಂತೆ ಮೆಡಿಕಲ್ ಸ್ಟೋರ್ ಮತ್ತು ಬ್ಯಾಂಕ್ ಗಳು ಹೊರತುಪಡಿಸಿ ಉಳಿದಂತೆ ಪಟ್ಟಣದ ಎಲ್ಲ ಅಂಗಡಿಗಳು ಬಂದ್  ಮಾಡಲಾಗುತ್ತಿದೆ 
-ಡಾ.ನಾಗವೇಣಿ ತಾಲೂಕು ದಂಡಾಧಿಕಾರಿಗಳು  
” ಜಗಳೂರು ಪಟ್ಟಣದಲ್ಲಿ ಅನವಶ್ಯಕವಾಗಿ ಸಂಚಾರ ಮಾಡುವವರಿಗೆ ಯಾವುದೇ ಅವಕಾಶ ನೀಡುವುದಿಲ್ಲ ಪಟ್ಟಣದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುವುದು ನಂತರ ಮೆಡಿಕಲ್ ಸ್ಟೋರ್ ಹಾಲಿನ ಅಂಗಡಿ ಹೊರತುಪಡಿಸಿ ಇನ್ನುಳಿದ ಎಲ್ಲ ಅಂಗಡಿಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗುವುದು ಪಟ್ಟಣದಲ್ಲಿ ಸಾರ್ವಜನಿಕರು ದ್ವಿಚಕ್ರ ವಾಹನಗಳಲ್ಲಿ ಅನವಶ್ಯಕವಾಗಿ ಸುತ್ತಾಡುವುದು ಕಂಡುಬಂದರೆ ಅಂತ ವಾಹನಗಳನ್ನು ಸಿಸ್ ಮಾಡಲಾಗುವುದು” 
 – ಮಂಜುನಾಥ್ ಪಂಡಿತ್   ವೃತ್ತ ನಿರೀಕ್ಷಕರು