14 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಮೇ.28-ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಕಲಬುರಗಿ ಉತ್ತರ ವಿಭಾಗದ ಎಸಿಪಿ ಚಂದ್ರಶೇಖರ ಜಿ.ಅವರ ಮಾರ್ಗದರ್ಶನದಲ್ಲಿ ರೋಜಾ ಪಿಎಸ್‍ಐ ಹಣಮಂತ್ರರಾಯ, ಸಿಬ್ಬಂದಿ ಭೀಮಾಶಂಕರ, ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ ಅವರು ದಾಳಿ ನಡೆಸಿ 47,600 ರೂ.ಮೌಲ್ಯದ 14 ಕ್ವಿಂಟಾಲ್ ಅಕ್ಕಿ 2 ಲಕ್ಷ ರೂ.ಮೌಲ್ಯದ ಗೂಡ್ಸ್ ವಾಹನ ವಶಕ್ಕೆ ಪಡೆದಿದ್ದಾರೆ.
ವಾಹನ ಚಾಲಕ ನಗರದ ಯದುಲ್ಲಾ ಕಾಲೋನಿಯ ಸೂಫಿಬಾಬಾ (26) ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.