14 ಅಡಿ ಎತ್ತರದ ಬುದ್ಧ ಮೂರ್ತಿ ನಿರ್ಮಾಣ

ಬೀದರ್:ಸೆ.22: ತಾಲ್ಲೂಕಿನ ಶಮಶೀರ ನಗರದಲ್ಲಿ 14 ಅಡಿ ಎತ್ತರದ ಗೌತಮ ಬುದ್ಧ ಮೂರ್ತಿ ನಿರ್ಮಾಣಗೊಳ್ಳುತ್ತಿದೆ.
ಬುದ್ಧ ಅನುಯಾಯಿ ಆಗಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿ.ಎನ್. ಫೌಂಡೇಷನ್ ಅಧ್ಯಕ್ಷ ವಿನೋದಕುಮಾರ ಅಪ್ಪೆ ಅವರು ವೈಯಕ್ತಿಕ ಖರ್ಚಿನಲ್ಲಿ ಬುದ್ಧರ ನಡೆಯುವ ಭಂಗಿಯ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ.
ಭೂಮಿ ಪೂಜೆ: ಮೂರ್ತಿ ನಿರ್ಮಾಣಕ್ಕೆ ಬೌದ್ಧ ಧರ್ಮಗುರುಗಳ ಸಾನಿಧ್ಯದಲ್ಲಿ ಭೂಮಿ ಪೂಜೆ ನೆರವೇರಿತು.
ಪ್ರಮುಖರಾದ ಶಿವಶರಣಪ್ಪ ಹುಗ್ಗಿ ಪಾಟೀಲ, ಪ್ರೇಮಸಾಗರ ದಾಂಡೇಕರ್, ವಿಶಾಲ್ ಅಪ್ಪೆ, ರಾಹುಲ್, ವಿಕಾಸ ಅಪ್ಪೆ, ಕಪಿಲ್ ಜ್ಯೋತಿ ಮೊದಲಾದವರು ಇದ್ದರು.