138 ಅಭ್ಯರ್ಥಿಗಳ ನಾಮಪತ್ರ‌ ಕ್ರಮಬದ್ಧ, 7 ತಿರಸ್ಕೃತ

ಕಲಬುರಗಿ,ಏ.21: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ನಡೆಯುವ ಚುನಾವಣೆಗೆ ಶುಕ್ರವಾರ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದ್ದು, 6 ಮಹಿಳೆಯರು ಸೇರಿ 138 ಅಭ್ಯರ್ಥಿಗಳ ನಾಮಪತ್ರ‌ ಕ್ರಮಬದ್ಧವಾಗಿದ್ದು, ಉಳಿದಂತೆ ವಿವಿಧ ಕಾರಣದಿಂದ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ ಎಂದು ಜಿಲ್ಲಾ‌ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಅಫಜಲಪೂರ-11, ಜೇವರ್ಗಿ-28, ಚಿತ್ತಾಪುರ-8, ಸೇಡಂ-15, ಚಿಂಚೋಳಿ-10, ಗುಲಬರ್ಗಾ ಗ್ರಾಮೀಣ-14, ಗುಲಬರ್ಗಾ ದಕ್ಷಿಣ-22, ಗುಲಬರ್ಗಾ ಉತ್ತರ-16 ಹಾಗೂ ಆಳಂದ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ನಾಮಪತ್ರ‌ ಕ್ರಮಬದ್ಧವಾಗಿವೆ.

ಉಳಿದಂತೆ ಅಫಜಲಪೂರ ಮತ್ತು ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ತಲಾ 2, ಜೇವರ್ಗಿ, ಚಿತ್ತಾಪುರ, ಹಾಗೂ ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ ತಲಾ 1 ಅಭ್ಯರ್ಥಿಗಳ ನಾಮಪತ್ರಗಳು ವಿವಿಧ ಕಾರಣದಿಂದ ತಿರಸ್ಕೃತವಾಗಿವೆ.

ಜಿಲ್ಲೆಯ 9 ಕ್ಷೇತ್ರಗಳಲ್ಲಿ ಒಟ್ಟಾರೆ 145 ಅಭ್ಯರ್ಥಿಗಳಿಂದ 217 ನಾಮಪತ್ರ ಸಲ್ಲಿಕೆಯಾಗಿದ್ದವು.
ಗುಲಬರ್ಗಾ ದಕ್ಷಿಣ ಕ್ಷೇತ್ರದ ಹಿಂದುಸ್ತಾನ ಜನತಾ ಪಕ್ಷ ( ಸೆಕ್ಯೂಲರ್) ಅಭ್ಯರ್ಥಿ ದಿನಕರ ರಾವ್ ಕುಲಕರ್ಣಿ, ಆಮ್ ಆದ್ಮಿ ಪಕ್ಷದ ಪರ್ಯಾಯ ಅಭ್ಯರ್ಥಿ ಸಚಿನ್ ಕೋಗನೂರ ನಾಮಪತ್ರ ತಿರಸ್ಕೃತವಾಗಿವೆ.
ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಪರ್ಯಾಯ ಅಭ್ಯರ್ಥಿ ಬಂದೇನವಾಜ್ ನಾಮಪತ್ರ ತಿರಸ್ಕೃತವಾಗಿವೆ.
ಚಿತ್ತಾಪುರ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಪರ್ಯಾಯ ಭ್ಯರ್ಥಿ ಭಾರತಿ ಗಂಡ ಮಣಿಕಂಠ ರಾಠೋಡ್ ನಾಮಪತ್ರ ತಿರಸ್ಕೃತವಾಗಿವೆ.
ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ ಅಮ್ ಆದ್ಮಿ ಪಕ್ಷದ ಪರ್ಯಾಯ ಅಭ್ಯರ್ಥಿ ನೂರಜಹಾ ಬೇಗಮ್ ನಾಮಪತ್ರ ತಿರಸ್ಕೃತವಾಗಿವೆ.
ಅಫಜಲಪೂರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ವಾಲಿ ಮತ್ತು ಚಂದ್ರಕಾಂತ ಅವರ ನಾಮಪತ್ರ ತಿರಸ್ಕೃತವಾಗಿವೆ.