1372 ಜನರ ವಿರುದ್ಧ ಪ್ರಕರಣ: 1,37,200 ದಂಡ ವಸುಲಿ

ಬೀದರ:ಜೂ.10: ರಾಜ್ಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗ ತಡೆಯಲು ರಾಜ್ಯ ಸರ್ಕಾರ ಕಳೆದ ತಿಂಗಳ 10ನೇ ತಾರಿಖಿನಿಂದ ಈ ತಿಂಗಳ 14ರ ವರೆಗೆ ವಿಧಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಶೇಧಾಜ್ಞೆ ಜಾರಿಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಇದ್ದರೂ ಕೆಲವರು ಅನಾವಶ್ಯಕವಾಗಿ ಸುಖಾ ಸುಮ್ಮನೆ ಹೊರಗಡೆ ತಿರುಗಾಡುತ್ತಿದ್ದು, ಅಂಥ ಸುಮಾರು 1372 ಜನರು ಮಾಸ್ಕ್ ಹಾಕದೇ ಇದ್ದ ಕಾರಣ ಅವರ ವಿರೂದ್ಧ ಪ್ರಕರಣ ದಾಖಲಿಸಿ 1,37,200/-ರೂ. ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ನಾಗೇಶ ಡಿ.ಎಲ್ ತಿಳಿಸಿದ್ದಾರೆ.
ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಅಂತಾ ಆದೇಶವಿದ್ದರು ಸಹ ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಸಂಚರಿಸಿದವರ 152 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗಿದೆ. ಇನ್ನೂಳಿದ ದಿನಗಳಲ್ಲಿಯೂ ಸಾರ್ವಜನಿಕರು ಲಾಕ್‍ಡೌನ್ ಆದೇಶ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಪ್ರಕಟಣೆ ಮೂಲಕ ಹೇಳಿದ್ದಾರೆ.