ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕಾರ್ಯಕ್ರಮ ನಿಮಿತ್ತ ದಾವಣಗೆರೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾದ ಡಿ. ಬಸವರಾಜ್‌ರವರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರ ಅನಂತನಾಯ್ಕ್, ಅಲ್ಲಾವಲಿ ಮುಜಾಯಿದ್, ಆಶ್ರಫ್ ಅಲಿ, ಡಿ. ಶಿವಕುಮಾರ್ ಹಾಜರಿದ್ದರು.