136ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ:ಪಕ್ಷದ ಹಿರಿಯರಿಗೆ ಸನ್ಮಾನ

ಸೇಡಂ,ಡಿ,28: ತಾಲೂಕಿನ ಊಡಗಿ ರಸ್ತೆಯ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ 136ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪಕ್ಷದ ಹಿರಿಯ ನಾಯಕರಿಗೆ ಸನ್ಮಾನಿಸುವ ಮುಖಾಂತರ ಸರಳವಾಗಿ ಆಚರಿಸಿದರು.ಸಂವಿಧಾನ ಮುನ್ನುಡಿ ಓದಿ ಪ್ರತಿಜ್ಞೆ ಮಾಡಲಾಯಿತು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಂಗಣ್ಣ ಯಾಕಾಪುರ, ಶಂಭುಲಿಂಗ ರೆಡ್ಡಿ, ಶರಣ್ ಬಸಪ್ಪ ಹಾಗರಗಿ,ಜಾಗೀರದಾರ ಸಭ್, ಆರೀಫ್ ಸೇಠ್, ರವರಿಗೆ ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ವರ ಮಾಲಿ ಪಾಟೀಲ್, ವೆಂಕಟರಾಮ ರೆಡ್ಡಿ ಪಾಟೀಲ್, ಬಸವರಾಜ ಪಾಟೀಲ್ ಊಡಗಿ, ವಿಶ್ವನಾಥ್ ಪಾಟೀಲ, ಅಬ್ದುಲ್ ಗಫುರ್, ಹೇಮರೆಡ್ಡಿ ಪಾಟೀಲ, ರಾಜು ಹಡಪದ್, ಸತ್ತರ್ ನಾಡೇಪಲ್ಲಿ, ವಿಲ್ಲಾಸ್ ಗೌತಮ್, ಪ್ರಶಾಂತ್ ಸೇಡಂ ಕರ್, ಅಂಕಿತ್ ಕುಮಾರ್, ಕಾಂಗ್ರೆಸ್ನ ಅನೇಕ ಕಾರ್ಯಕರ್ತರು ಇದ್ದರು.