ಕರ್ನಾಟಕ ಸರ್ಕಾರದ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ ನೇಮಕವಾದ ಶರಣು ತಳ್ಳಿಕೇರಿ ಅವರನ್ನು ಗದಗ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ದಾಸರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಪ್ರದಾನಕಾರ್ಯದರ್ಶಿ ನವೀನ ಗುಳಗಣ್ಣವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಬಯಲು ಸೀಮೆ ಮಂಡಳಿ ನಿರ್ದೇಶಕರಾಗಿ ನೇಮಕವಾದ ಸುಧೀರ್ ಕಾಟಿಗರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವೆಂಕಟೇಶ್ ದಾಸರ ಅಭಿಮಾನಿ ಬಳಗದವರು ಹೊರತಂದಿರುವ ನೂತನ ವರ್ಷದ ದರ್ಶಿಕೆಯನ್ನು ಬಿಡುಗಡೆಗೊಳಿಸಿದರು ಬಸವಣ್ಣೆಯ್ಯ ಹಿರೇಮಠ, ವೆಂಕಟೇಶ್ ಬೇಲೂರ್, ಪರಶು ಬಂಕದಮನಿ, ರಮೇಶ್ ಪೂಜಾರ, ಸಾಲಿ ಮುಂತಾದವರು ಉಪಸ್ಥಿತರಿದ್ದರು.