135ನೇ ಶಿಕ್ಷಕರ ದಿನಾಚರಣೆ

ವಿಜಯಪುರ, ಸೆ.8-ಶ್ರೀ ಶಿವಶರಣೆ ನಿಂಬೆಕ್ಕ ವಿದ್ಯಾ ಸಂಸ್ಥೆಯ ಅಡಿಯಲ್ಲಿನ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ ಹಾಗೂ ಶ್ರೀ ಡಿ.ಎಮ್. ಕುಮಾನಿ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ 135ನೇ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೇಯ ಅಧ್ಯಕ್ಷರಾದ ಎಸ್.ಡಿ. ಕುಮಾನಿ ಇವರು ವಹಿಸಿದ್ದರು. ಅತಿಥಿಗಳಾಗಿ ಮಲ್ಲಿಕಾರ್ಜುನ ಮಾಲಗಾರ ಹಾಗೂ ಭೀಮರಾಯ ತಳವಾರ ಆಗಮಿಸಿದ್ದಾರೆ.
ಮುಖ್ಯೋಪಾಧ್ಯಾಯರಾದ ಎಸ್.ಎಮ್. ಮಣಿಯಾರ ಸ್ವಾಗತಿಸಿದರು. ಶ್ರೀಮತಿ ಬಿ.ಆರ್. ಲಾಳಿ, ಎಚ್.ಪಿ. ದೇಶಪಾಂಡೆ, ಜಿ.ಕೆ. ಜಹಾಗೀರದಾರ, ಜೆ.ಎಮ್. ಹೊನ್ನಳ್ಳಿ, ಬಿ.ಜೆ. ಗರೇಬಾಳ, ಪಿ.ಎಸ್. ಕುಮಾನಿ ಇತರರು ಉಪಸ್ಥಿತರಿದ್ದರು. ಸಿ.ಎಸ್. ಗೂಗು ವಂದಿಸಿದರು.