ಬಾಗಲಕೋಟ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಕುಮಾರಗೌಡ ಜನಾಲಿ ಇವರನ್ನು ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‍ನಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರು ಹಾಗೂ ಊರಿನ ಪ್ರಮುಖರು ಬಸವರಾಜ ಶೆಟ್ಟರ ಅವರ ಅಂಗಡಿಯಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕುಳಗೇರಿ ಕ್ರಾಸ್ ಪಂಚಾಯತ ನೂತನ ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಅಭಿಮಾನಿಗಳು ಹಾಜರಿದ್ದರು.