ಸಿರಿಧಾನ್ಯ ಬೆಳೆಯುವುದರ ಜೊತೆಗೆ ಮೌಲ್ಯವರ್ಧನೆ  ಮುಖ್ಯ: ಡಾ. ಚೆಟ್ಟಿ

ಧಾರವಾಡ ಜ.9-ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ, ಮೌಲ್ಯವರ್ಧನೆಯುತುಂಬಾ ಮುಖ್ಯವಾಗಿದೆ, ಉತ್ಪನ್ನಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಉತ್ತಮ ಲೇಬಲ್ ಬಳಸಿ ಮಾರಾಟ ಮಾಡಬಹುದು,ಜೊತಗೆ ವಾಣಿಜ್ಯೀಕರಣಕ್ಕೆ ಒತ್ತು ಕೊಡಿ ಎಂದು ಕೃವಿವಿ ಕುಲಪತಿ ಡಾ. ಮಹಾದೇವ ಬ. ಚೆಟ್ಟಿ ತಿಳಿಸಿದರು.
ಅವರು ಕೃವಿವಿ, ಧಾರವಾಡದಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿನ Iಅಂಖ-ಓಂಇಅನುದಾನಿತ “ಅರಬಳಕೆಯಲ್ಲಿರುವ ಸಿರಿಧಾನ್ಯಗಳ ಪೌಷ್ಟಿಕ ಸಂಯೋಜನೆ, ಮೌಲ್ಯವರ್ಧನೆ ಹಾಗೂ ವಾಣಿಜ್ಯೀಕರಣ ಯೋಜನೆ”, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರಾಣೇಬೆನ್ನೂರು ಹಾಗೂ ಭೂಮಿಕಾ ರೈತರ ಉತ್ಪಾದಕರ ಸೌಹಾರ್ದ ಸಹಕಾರಿ ನಿಯಮಿತ, ಇಟಗಿ ಇವರ ಸಂಯುಕ್ತ ಆಶ್ರಯದಲ್ಲಿ “ಬರಗು ಮತ್ತು ಕೊರಲೆಯ ಮೌಲ್ಯವರ್ಧನೆ ಹಾಗೂ ಔದ್ಯೋಗಿಕ ಅವಕಾಶಗಳು” ಎಂಬ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಜನೆಯ ಪ್ರಧಾನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಮುಖ್ಯಸ್ಥರಾದ ಡಾ. ಸರೋಜನಿ ಜ ಕರಕಣ್ಣವರಸ್ವಾಗತ ಭಾಷಣದಲ್ಲಿ ಯೋಜನೆಯ ಮೂಖಾಂತರ ಹಲವಾರು ಪದಾರ್ಥಗಳನ್ನು ಅಭಿವೃದ್ಧಿ ಪಡಿಸಿರುವುದು ಹಾಗೂ ಯೋಜನೆಯ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.ಕಾರ್ಯನಿರ್ವಾಹಕ ನಿರ್ದೇಶಕರು, ವಿ.ಆರ್.ಡಿ.ಎಸ್ ರಾಣೇಬೆನ್ನೂರು, ಶ್ರೀ ಎಸ್.ಡಿ. ಬಳಿಗಾರ, ವಿ.ಆರ್.ಡಿ.ಎಸ್ ಸಿರಿಧಾನ್ಯಗಳ ಸಂಸ್ಕರಣಾ ಕೇಂದ್ರವು ಇಟಗಿ ಗ್ರಾಮದಲ್ಲಿದ್ದು, ಸಿರಿಧಾನ್ಯದಿಂದ ಇತರ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಈ ತರಬೇತಿಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು. ಸಮಾರಂಭದ ಅಧ್ಯಕ್ಷರಾದಸಂಶೋಧನಾ ನಿರ್ದೇಶಕ,ಡಾ. ಪಿ. ಎಲ್. ಪಾಟೀಲ, ತರಬೇತಿ ಶಿಬಿರಾರ್ಥಿಗಳು ಸ್ವ-ಉದ್ಯಮಿಯಾದರೆ, ಸ್ವಾವಲಂಬಿಯಾಗಿಬದುಕಬಹುದು ಅಲ್ಲದೇ ಅವಶ್ಯವಿರುವ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಆದಾಯ ಹೆಚ್ಚಿಸಬಹುದೆಂದರು.
ಶಿಕ್ಷಣ ನಿರ್ದೇಶಕ,ಡಾ. ಎಸ್. ಬಿ. ಹೊಸಮನಿ, ಡೀನ್, ಸಮುದಾಯ ವಿಜ್ಞಾನ ಮಹಾವಿದ್ಯಾಲಯ,ಡಾ. ಉಷಾ ಮಳಗಿ, ಮತ್ತು ವಿಶೇಷ ಅಧಿಕಾರಿಗಳು(ಬೀಜ),ಡಾ.ಜೆ.ಎಸ್.ಹಿಳ್ಳಿ ಉಪಸ್ಥಿತರಿದ್ದರು. ಪ್ರಾಧ್ಯಾಪಕರು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಡಾ. ಪುಷ್ಪಾ ಭಾರತಿ ವಂದಿಸಿದರು.ಡಾ. ಸರೋಜನಿ ಜೆ. ಕರಕಣ್ಣವರ, ಡಾ. ಹೇಮಲತಾ ಎಸ್., ಡಾ.ಹೆಚ್.ಡಿ. ಮಿತ್ರಣ್ಣವರ್, ಡಾ. ಕವಿತಾ ಸಿ., ಗೀತಾ ನಾಯಕ ಮತ್ತು ಡಾ. ಸ್ನೇಹಾ ಶೀಗಿಹಳ್ಳಿ ತರಬೇತಿ ನೀಡಿದರು. ರಾಣೆಬೆನ್ನೂರು ತಾಲ್ಲೂಕಿನ 35 ಭೂಮಿಕಾ ಈPಔ ಸದಸ್ಯರು ತರಬೇತಿಯ ಸದುಪಯೋಗ ಪಡೆದರು.