132 ಪ್ರಕರಣ ಭೇದಿಸಿ 1.18 ಕೋಟಿ ರೂ.ಮೌಲ್ಯದ ವಸ್ತು ವಾರುಸುದಾರರಿಗೆ ಮರಳಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಕಲಬುರಗಿ,ನ.30-ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 2019 ಮತ್ತು 2020-21ರವರೆಗೆ ಜಿಲ್ಲೆಯಲ್ಲಿ ನಡೆದ 132 ಕಳ್ಳತನ ಪ್ರಕರಣಗಳನ್ನು ಭೇದಿಸಿ 1,18,28,958 ರೂ.ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವುದರ ಮೂಲಕ ದಕ್ಷತೆ ಮೆರೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಭವನದಲ್ಲಿಂದು ವಾರಸುದಾರರಿಗೆ ವಸ್ತುಗಳನ್ನು ಮರುಕಳಿಸಲಾಯಿತು.
ಹೆಚ್ಚುವರಿ ಎಸ್.ಪಿ.ಪ್ರಸನ್ನ ದೇಸಾಯಿ ವiತ್ತು ಜಿಲ್ಲೆಯ ಡಿ.ವೈ.ಎಸ್.ಪಿಗಳು, ಇನ್ಸಪೆಕ್ಟರ್‍ಗಳು ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.